ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಜಿ.ಪಂ ಕಚೇರಿಯಲ್ಲಿ ಕೆಡಿಪಿ ಸಭೆ

ಚಿತ್ರದುರ್ಗ : ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಅರಣ್ಯ, ಗಣಿ & ಭೂವಿಜ್ಞಾನ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಸಭೆಯಲ್ಲಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾಮ್ ಆದಿತ್ಯ ಬಿಸ್ವಾಸ್ ಗರಂ ಆದ ಘಟನೆ ನಡೆಯಿತು ಸರ್ಕಾರದಿಂದ ಅಧಿಕಾರಿಗಳಾದ ನಿಮಗೆ ಸಂಬಳ ಬರುತ್ತೆ, ಕೆಲಸ ಮಾಡಿ, ಸರಿಯಾದ ಮಾಹಿತಿ ಪಡೆಯದೇ ಕಥೆ ಹೇಳ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಎಂ ಚಂದ್ರಪ್ಪ, ಟಿ.ರಘುಮೂರ್ತಿ, ಎಂಎಲ್ಸಿ ಕೆ.ಎಸ್ ನವೀನ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು

Edited By : PublicNext Desk
Kshetra Samachara

Kshetra Samachara

08/09/2025 04:59 pm

Cinque Terre

720

Cinque Terre

0

ಸಂಬಂಧಿತ ಸುದ್ದಿ