", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/271983_1757330837_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "9380627082" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೊಳಕಾಲ್ಮುರು : ನಾನಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸೋಮವಾರ ತಾಲೂಕಿನ ಬಿ.ಜಿ.ಕೆರೆ...Read more" } ", "keywords": "Molakalmuru farmers' protest against BESCOM"", "url": "https://dashboard.publicnext.com/node" }
ಮೊಳಕಾಲ್ಮುರು : ನಾನಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸೋಮವಾರ ತಾಲೂಕಿನ ಬಿ.ಜಿ.ಕೆರೆ ಬೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, “ತಾಲೂಕಿನಲ್ಲಿ ಸಾವಿರಾರು ರೈತ ಕುಟುಂಬಗಳು ತೋಟದ ಮನೆಗಳಲ್ಲಿ ವಾಸಿಸುತ್ತಿದ್ದು, ಬೆಸ್ಕಾಂ ಇಲಾಖೆಯು ಪಂಪ್ ಸೆಟ್ ಲೈನ್‌ಗಳಿಗೆ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ನೀಡುತ್ತಿದ್ದ ವಿದ್ಯುತ್ ಅನ್ನು ಸಿಂಗಲ್ ಫೇಸ್‌ಗೆ ಕಡಿತಗೊಳಿಸಿರುವುದರಿಂದ ಈ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಹಾವು, ಚೇಳು ಸೇರಿದಂತೆ ವಿಷಜಂತುಗಳ ಕಾಟದ ಜೊತೆ ಕಾಡುಪ್ರಾಣಿಗಳು ಮತ್ತು ಕಳ್ಳರ ಭೀತಿಯಲ್ಲಿಯೇ ಬದುಕಬೇಕಾಗಿದೆ,” ಎಂದು ದೂರಿದರು.
ಅವರು ಮುಂದುವರಿಸಿ, “ತೋಟದ ಮನೆಗಳಿಗೆ ಆರ್‌ಆರ್ ಸಂಖ್ಯೆ ಇದ್ದು, ವಿದ್ಯುತ್ ಬಿಲ್ ಪಾವತಿಸುತ್ತಿದ್ದರೂ ವಿದ್ಯುತ್ ಕಡಿತ ಮಾಡಿ ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ತಕ್ಷಣವೇ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ವಿದ್ಯುತ್ ನೀಡಬೇಕು. ಪ್ರಸ್ತುತ ಇರುವ ಅವೈಜ್ಞಾನಿಕ ಪದ್ಧತಿಯನ್ನು ಕೈಬಿಡಬೇಕು. ವಿದ್ಯುತ್ ಮಾರ್ಗದಲ್ಲಿ ಬೆಳೆದಿರುವ ಗಿಡ, ಮರ, ಬಳ್ಳಿಗಳನ್ನು ತೆರವುಗೊಳಿಸಬೇಕು. ಗೃಹ ವಿದ್ಯುತ್ ಬಳಕೆಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನು ಖಡಾಯವಾಗಿ ನಿಲ್ಲಿಸಬೇಕು,” ಎಂದು ಒತ್ತಾಯಿಸಿದರು.
PublicNext
08/09/2025 04:57 pm