", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/387839-1757396740-WhatsApp-Image-2025-09-09-at-9.12.08-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಂಡೂರು : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀ ಗಂಡಿ ಬಸವೇಶ್ವರ ದೇವಸ್ಥಾನದ ಅವರಣದಲ್ಲಿರುವ ಉ...Read more" } ", "keywords": "Sanduru, 10th century, Virupaksha, Vishnu deity, worship, undiscovered, manganese stone inscription, historical find, archaeology, ancient inscription", "url": "https://dashboard.publicnext.com/node" } ಸಂಡೂರು : 10 ನೇ ಶತಮಾನದ ವಿರೂಪಾಕ್ಷ, ವಿಷ್ಣು ದೇವರ ಆರಾಧನೆ ಉಲ್ಲೇಖದ ಅಪ್ರಕಟಿತ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಡೂರು : 10 ನೇ ಶತಮಾನದ ವಿರೂಪಾಕ್ಷ, ವಿಷ್ಣು ದೇವರ ಆರಾಧನೆ ಉಲ್ಲೇಖದ ಅಪ್ರಕಟಿತ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ

ಸಂಡೂರು : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀ ಗಂಡಿ ಬಸವೇಶ್ವರ ದೇವಸ್ಥಾನದ ಅವರಣದಲ್ಲಿರುವ ಉಭಯ ದೇವರುಗಳ ಆರಾಧನೆಯನ್ನು ಉಲ್ಲೇಖಿಸುವ ಅಪರೂಪದ ಮ್ಯಾಂಗನೀಸ್ ಶಿಲಾಶಾಸನವನ್ನು ದೇಗುಲದ ಅರ್ಚಕರಾದ ಎಂ. ಎನ್. ವೀರಯ್ಯಸ್ವಾಮಿ, ಇತಿಹಾಸ ಉಪನ್ಯಾಸಕರಾದ ಡಾ. ತಿಪ್ಪೆರುದ್ರ, ನಾಗಭೂಷಣ ಅವರುಗಳ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೆಗೌಡ, ಡಾ.ತಿಮ್ಮಲಾಪುರದ ನರಸಿಂಹ, ಡಾ. ವೀರಾಂಜಿನಯ್ಯ, ಸಂಶೋಧಕಾರದ ವೀರಭದ್ರಗೌಡ, ಎಚ್. ರವಿ ಪತ್ತೆ ಹಚ್ಚಿದ್ದಾರೆ.

ಅಪರೂಪದ ವಿಶೇಷ ಮ್ಯಾಂಗನೀಸ್ ಶಿಲಾಶಾಸನ :

ಸಂಡೂರಿನ ಸುಪ್ರಸಿದ್ಧ ಜಲಾಶಯ ಎಂದು ಖ್ಯಾತಿ ಗಳಿಸಿದ ನಾರಿಹಳ್ಳಿ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀ ಗಂಡಿ ಬಸವೇಶ್ವರ ದೇಗುಲದ ಅವರಣದಲ್ಲಿರುವ ಹುಟ್ಟು ಮ್ಯಾoಗನೀಸ್ ಬಂಡೆಗೆ ಶಾಸನವನ್ನು ಬರೆಸಲಾಗಿದೆ. ಈ ಶಾಸನವು ಉತ್ತರಾಭಿಮುಖವಾಗಿದ್ದು, ಶಾಸನದ ಎಡಗಡೆಗೆ ಸೂರ್ಯ, ಬಲಗಡೆಗೆ ಚಂದ್ರ ಹಾಗೂ ಮದ್ಯದಲ್ಲಿ ಶಿವನ ಲಿಂಗದ ಚಿತ್ರಗಳಿದ್ದು ವಿಶೇಷವಾಗಿ ಬಲಬದಿಯ ಚಂದ್ರನ ಬಳಿಯಲ್ಲಿ ನಕ್ಷತ್ರದ ಚಿತ್ರವನ್ನು ಕೆತ್ತಲಾಗಿದೆ.

ಈ ಶಾಸನದ ಕಾಲಾವಧಿ ಉಲ್ಲೇಖವಾಗಿಲ್ಲ. ಆದರೂ ಲಿಪಿಯ ಶೈಲಿ ಹಾಗೂ ದುರ್ಮುಖಿ ಸಂವತ್ಸರದ ಮಾರ್ಗಶಿರಾ ಕಾರ್ತಿಕ ಎಂದು ಉಲೇಖ ಆಗಿರುವದರಿಂದ ಇದು ಕ್ರಿ. ಶ.10ನೇ ಶತಮಾನದ ಶಾಸನ ಆಗಿರಬೇಕೆನಿಸುತ್ತದೆ. ಈ ಶಾಸನವು ನೆಲದಿಂದ 10 ಅಡಿ ಎತ್ತರದ ಮ್ಯಾoಗನೀಸ್ ಕಲ್ಲಿಗೆ 3 ಅಡಿ ಎತ್ತರ 3 ಅಡಿ ಅಗಲದಲ್ಲಿ ಆರು ಸಾಲುಗಳಲ್ಲಿ ಅಕ್ಷರಗಳನ್ನು  ಬರೆಸಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಗೋವಿಂದ ಅವರು ತಿಳಿಸಿದ್ದಾರೆ.

ರಂಗ ಸಮುದ್ರದ ಉಲ್ಲೇಖ :

ಈ ಅಪರೂಪದ ಅಪ್ರಕಟಿತ ಶಿಲಾ ಶಾಸನದ ಆರು ಸಾಲುಗಳಲ್ಲಿ ದುರ್ಮುಖಿ ಸಂವತ್ಸರದ ಮಾರ್ಗಶಿರ ಕಾರ್ತೀಕ ೧ ರಲು ಎಂದು ಆರಂಭಗೊಳ್ಳುತ್ತದೆ. ಆದರೆ ವಿಶೇಷವಾಗಿ ರಂಗಸಮುದ್ರ ಎಂದು ಉಲ್ಲೇಖಿಸಲಾಗಿದೆ. ಈಗ ಕರೆಯುವ ನಾರಿಹಳ್ಳ ಜಲಾಶಯವನ್ನು ರಂಗಸಮುದ್ರ ಎಂದು ಆಗ ಕರೆದಿರಬೇಕು.ಈಚೆಗೆ ಈ ಸ್ಥಳವನ್ನು ಮಾನಸ ಸರೋವರ ಎಂತಲೂ ಕರೆಯಲಾಗಿದೆ. ಶಾಸನದ ವಿವರಣೆಯoತೆ ಈ ರಂಗಸಮುದ್ರದಲ್ಲಿದ್ದ ವಿರೂಪಾಕ್ಷ ಮತ್ತು ವಿಷ್ಣು ದೇವರನ್ನು ಆರಾಧನೆ ಮಾಡಲಾಗುತಿತ್ತು.

ಉಭಯ ದೇವರುಗಳ ನೈವೇದ್ಯ ಮಾಡಿದರೆ ಮರು ಜನ್ಮ ಪ್ರಾಪ್ತಿ ಆಗುವುದು ಅಂತೆಯೇ ಅಂದಿನ ಕಣಿವೆ ನಾಗೂಜನು ಮರು ಜಲ್ಮಕ್ಕಾಗಿ ಆರಾಧಿಸಿ ತಪಸ್ಸು ಮಾಡಿದನು. ಇಲ್ಲಿ ಮರು ಜಲ್ಮ ಬರುವುದು ಎಂದರೆ ಒಂದು ರೀತಿ ಮತ್ತೆ ಲೋಕದಲ್ಲಿ ಹುಟ್ಟಿ ಮೋಕ್ಷ ಬಯಸದಂತಾಗುತ್ತದೆ.ಮರು ಜಲ್ಮ ಪಡೆದರೆ ಪುನಃ ಭೂಲೋಕದಲ್ಲಿ ಜನಿಸಿ ನಾನಾ ಕಷ್ಟಗಳಿಗೆ ಗುರಿಯಾಗುವುದನ್ನು ತಪ್ಪಿಸಿ ಮೋಕ್ಷ ಬಯಸದೇ ಉಳಿಯ ಬೇಕಾಗುತ್ತದೆ. ಇದರಿಂದ ಶಾಸನದಲ್ಲಿ ಮರುಜಲ್ಮಕೆ ವಿಳಸಿತನಾಗುವನು ಎಂದು ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಈ ಶಾಸನವು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವಾವಿದ್ಯಾಲಯದ ಪ್ರೊ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಶಾಪಾಶಯದ ಉಲ್ಲೇಖ : ರಾಜರು ಹೇಳಿದ ರಾಜಾಜ್ಞೆಯನ್ನು ಕಲ್ಲಿನಲ್ಲಿ ಶಾಸನದ ರೂಪದಲ್ಲಿ ಬರೆಸಲಾಗುತಿತ್ತು. ಹೀಗೆ ಬರೆಸಿದ ಶಾಸನಗಳು ಶಾಶ್ವತವಾಗಿ ಇರಲಿ ಎಂದು ಶಾಸನದ ಕೊನೆ ಸಾಲಿನಲ್ಲಿ ಶಾಪಾಶಯವನ್ನು ಬರೆಸುತ್ತಿದ್ದರು. ಹೀಗೆ ಬರೆಸಿದ್ದರಿಂದ ಈಗಲೂ ಶಾಸನಗಳು ಉಳಿದಿವೆ. ಹಾಗೇನೆ ಈ ಮ್ಯಾoಗನೀಸ ಶಿಲಾಶಾಸನದ ಕೊನೆಗೆ ಈ ಶಾಸನವನ್ನು ಅಳಿಪಿ, ದೈವಾರಾಧನೆಯನ್ನು ಪರಿಪಾಲಿಸದವರ ಬಾಯಲಿ ಕತ್ತೆ ತುಣ್ಣಿ ಕಲ್ಲುಪ್ಪು ಎಂದು ಬರೆದಿದೆ ಎಂದು ತಂಡದ ಮತ್ತೋರ್ವ ಸದಸ್ಯರಾದ ಡಾ. ಕೃಷ್ಣೆಗೌಡ ಅವರು ತಿಳಿಸಿದ್ದಾರೆ.

   

ಸಂರಕ್ಷಣೆ ಅಗತ್ಯ : ಇಂತಹ ಅಪರೂಪದ ಶಿಲಾಶಾಸನಗಳನ್ನು ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಬೇಕಾಗಿದೆ ಹಾಗೇನೆ ಸಂಬಂಧಪಟ್ಟ ಇಲಾಖೆ, ಇಲ್ಲವೇ ಆಡಳಿತಾಂಗವು ರಕ್ಷಣೆ ಮಾಡಲಿ ಎಂದು ಇತಿಹಾಸ ಉಪನ್ಯಾಸಕರಾದ ಡಾ. ತಿಪ್ಪೆರುದ್ರ ಅವರು ಕೊರಿದ್ದಾರೆ.

Edited By : Abhishek Kamoji
PublicNext

PublicNext

09/09/2025 11:16 am

Cinque Terre

7 K

Cinque Terre

0

ಸಂಬಂಧಿತ ಸುದ್ದಿ