", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/52563-1757065597-_(1280-x-720-px)-(10).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೊಂದಣಿ ಆಗದೇ ಬಾಕಿ ಇದ್ದಲ್ಲಿ, ಸ್ವಂತ ನಿವೇಶನ ಕೊರತೆ ಇದ್ದಲ್ಲ...Read more" } ", "keywords": ""anganwadi sites, school sites, DC Divakar, land allocation, infrastructure development, education infrastructure, rural development" ", "url": "https://dashboard.publicnext.com/node" } ಅಂಗನವಾಡಿ, ಶಾಲೆಗಳಿಗೆ ನಿವೇಶನ ನೀಡಲು ಮೀನಾಮೇಷ ಸಲ್ಲದು - ಡಿಸಿ ದಿವಾಕರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗನವಾಡಿ, ಶಾಲೆಗಳಿಗೆ ನಿವೇಶನ ನೀಡಲು ಮೀನಾಮೇಷ ಸಲ್ಲದು - ಡಿಸಿ ದಿವಾಕರ್

ಹೊಸಪೇಟೆ : ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೊಂದಣಿ ಆಗದೇ ಬಾಕಿ ಇದ್ದಲ್ಲಿ, ಸ್ವಂತ ನಿವೇಶನ ಕೊರತೆ ಇದ್ದಲ್ಲಿ ಆಯಾ ತಾಲೂಕಿನ ತಹಶೀಲ್ದಾರರು, ತಾಪಂ ಇಒಗಳು ಮತ್ತು ಬಿಇಒಗಳು ಸಮನ್ವಯತೆಯಿಂದ ಶೀಘ್ರವೇ ಪರಿಶೀಲಿಸಿ ಅಭಿಯಾನದಂತೆ ಕ್ರಮವಹಿಸಿ ಬೇಡಿಕೆಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವಾಕರ್ ಹೇಳಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಲಾ ಆಸ್ತಿ ನೊಂದಾಣಿ, ಹಕ್ಕು ಬದಲಾವಣೆ, ಅಂಗನವಾಡಿ ಕಟ್ಟಡ, ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಒದಗಿಸುವ ಬಗ್ಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಿವೇಶನ ಲಭ್ಯವಿಲ್ಲದ ಅಂಗನವಾಡಿ ಕೇಂದ್ರಗಳು ನಗರ ವ್ಯಾಪ್ತಿಯಲ್ಲಿ 77 ಹಾಗೂ ಗ್ರಾಮೀಣ ಭಾಗದಲ್ಲಿ 14 ಕೇಂದ್ರಗಳು ಇವೆ. ಮತ್ತು ಇ-ಖಾತಾ ಬಾಕಿ ಇರುವ ಕೇಂದ್ರಗಳು ನಗರ ವ್ಯಾಪ್ತಿಯಲ್ಲಿ 175 ಗ್ರಾಮೀಣ ಭಾಗದಲ್ಲಿ 1050 ಕೇಂದ್ರಗಳು ಇವೆ. ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೊಂದಾಣಿ ಆಗದೇ ಪ್ರಾಥಮಿಕ ಶಾಲೆಗಳು 587, ಪ್ರೌಢಶಾಲೆಗಳು 48 ಸೇರಿದಂತೆ ಒಟ್ಟು 635 ಬಾಕಿ ಇವೆ. ಇವುಗಳನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷತೆ ವಹಿಸದೇ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಮತ್ತು ಗ್ರಾಪಂ ಪಂಚಾಯತಿ ಅಧಿಕಾರಿಗಳು ಹತ್ತು ದಿನದೊಳಗೆ ಗರಿಷ್ಟ ಮಟ್ಟದಲ್ಲಿ ಪೂರ್ಣಗೊಳಿಸಬೇಕು. ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕಾದ ಅಧಿಕಾರಿಗಳು ಅಂಗನವಾಡಿಗಳ ಅಭಿವೃದ್ಧಿಗೆ ಹೆಚ್ಚಿನ ಆಸ್ಯತೆ ನೀಡಬೇಕು. ಅಂಗನವಾಡಿ ಕೇಂದ್ರಗಳು ಸುಸ್ಥಿತಿಯಲ್ಲಿದ್ದರೇ ಮಾತ್ರ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಇಲಾಖೆ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ. ನೊಂದಾಣಿಗೆ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದರೇ ಜಿಪಂ ಸಿಇಒ, ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಅಯಾ ಗ್ರಾಪಂ ಪಿಡಿಒಗಳು ಸ್ಥಳ ಪರಿಶೀಲನೆ ನಡೆಸಿ ಗ್ರಾಮನತ್ತು, ಗ್ರಾಮಠಾಣಾ ವ್ಯಾಪ್ತಿಯಲ್ಲಿದ್ದರೇ ಅಧಿಕೃತ ನಮೂನೆಗಳನ್ನು ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳ ಅಗತ್ಯವಿದ್ದರೇ ಕೂಡಲೇ ಸ್ಥಳ ಗುರುತಿಸಿ ವರದಿ ನೀಡಬೇಕು ಎಂದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಜಿಪಂ ಯೋಜನಾ ನಿರ್ದೇಶಕ ಜೆ.ಎಂ.ಅನ್ನದಾನ ಸ್ವಾಮಿ ಸೇರಿದಂತೆ ವಿವಿಧ ತಾಲೂಕಿನ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

05/09/2025 03:17 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ