", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/29545520250909112414filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "9740080658" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿ ಫಲಾನುಭವಿ ಮನೆಗೂ ತಲುಪಬೇಕು ಎನ್ನುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಪ್ರಗತಿ ಪರಿಶ...Read more" } ", "keywords": "Node", "url": "https://dashboard.publicnext.com/node" }
ನವಲಗುಂದ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿ ಫಲಾನುಭವಿ ಮನೆಗೂ ತಲುಪಬೇಕು ಎನ್ನುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ಸರ್ಕಾರ ಆದೇಶದಂತೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ತಾಲೂಕಿನ ಹಾಲಕುಸಗಲ್ ಗ್ರಾಮದ ಶಿವಾನಂದ ಮಠದ ಸಭಾಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಸಮಿತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತ್ ಮಟ್ಟದ ಗ್ಯಾರಂಟಿ ಯೋಜನೆಗಳ ಶಿಬಿರದಲ್ಲಿ ಮಾತನಾಡಿ, ಸರ್ಕಾರದಿಂದ ನೀಡುತ್ತಿರುವ ಯೋಜನೆಗಳು ಎಲ್ಲರಿಗೂ ಸರಿಯಾದ ರೀತಿಯಲ್ಲಿ ದೊರೆಯುತ್ತಿರುವ ಬಗ್ಗೆ ಚರ್ಚಿಸಿದರು.
ಸರ್ಕಾರದ ಯೋಜನೆಗಳು ಪಲಾನುಭವಿ ತಲಪಬೇಕು ಹಾಗೇ ಏನಾದರೂ ತೊಂದರೆ ಇದ್ದರೆ ಸ್ಥಳದಲ್ಲಿ ಪಲಾನುಭವಿಗಳ ಸಮಸ್ಯೆ ಆಲಿಸಿ ಅಲ್ಲೇ ಬಗೆಹರಿಸಲುವಾಗಿ ಸರ್ಕಾರ ಗ್ರಾಮಮಟ್ಟದಲ್ಲಿ ಸಭೆ ಮಾಡಲು ತಿಳಿಸಿದೆ ಇದರ ಸದುಪಯೋಗ ಪಡೆದುಕೊಳ್ಳಿ ಕ್ಲಿಷ್ಟರೀತಿಯಲ್ಲಿ ಸಮಸ್ಯೆ ಇದ್ದರೆ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆಮಾಡಲಾಗುವುದು, ತಾಲ್ಲೂಕಿನ ಯಾವುದೇ ಬಡ ಕುಟುಂಬವೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಹೊರ ಉಳಿಯಬಾರದು. ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯನ್ನ 98% ಪಲಾನುಭವಿ ಪಡೆಯುತ್ತಿರುವ ಗ್ರಾಮ ನಿಮ್ಮದ್ದಾಗಿದ್ದು ಸಂತೋಷವಾಗಿದೆ ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಇಒ ಭಾಗ್ಯಶ್ರೀ ಜಾಗೀದಾರ, ಸಿಡಿಪಿಒ ಗಾಯತ್ರಿ ಪಾಟೀಲ, ಹೆಸ್ಕಾಂ ಎಇಇ ಪ್ರೀತಿ. ಕೆ, ಎಸ್.ಎಂ.ವಾಲಿ, ಟಿ.ಎಲ್. ಮುತ್ತಣ್ಣವರ, ಗ್ಯಾರಂಟಿ ಸಮಿತಿ ಸದ್ಯಸರಾದ ದಿಲೀಪ್ ನದಾಫ್, ಆನಂದ ಜಕ್ಕನಗೌಡ್ರ, ಈರಣ್ಣ ಅಂಗಡಿ, ಮಲ್ಲಿಕಾರ್ಜುನ ಗುಜ್ಜಳ, ಡಿ.ಎಚ್.ಖುದ್ದಣ್ಣವರ, ಲಕ್ಷ್ಮಣ ನೀಡವಣಿ ಗ್ರಾಮಸ್ಥರು, ಆಶಾ ಕಾರ್ಯಕರ್ತರು, ಮಹಿಳೆಯರು ಇದ್ದರು.
Kshetra Samachara
09/09/2025 11:24 am