", "articleSection": "Politics,Crime,Law and Order,News,Public News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1757326567-09~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: 11ನೇ ದಿನದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪೊಲೀಸರಿಂದ ನಡೆದ ಲಾಠಿ ಪ್ರಹಾರ ಖಂಡಿಸಿ ಸೋಮವಾರ ...Read more" } ", "keywords": "Dharwad,BJP demands,CPI Kamatagi,Police Constable Syed,suspension deadline,political pressure,local news,Karnataka,police suspension", "url": "https://dashboard.publicnext.com/node" } ಧಾರವಾಡ: ಸಿಪಿಐ ಕಮತಗಿ, ಪೊಲೀಸ್ ಪೇದೆ ಸೈಯದ್ ಅಮಾನತ್ತಿಗೆ ಎರಡು ದಿನ ಗಡುವು ಕೊಟ್ಟ ಬಿಜೆಪಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಪಿಐ ಕಮತಗಿ, ಪೊಲೀಸ್ ಪೇದೆ ಸೈಯದ್ ಅಮಾನತ್ತಿಗೆ ಎರಡು ದಿನ ಗಡುವು ಕೊಟ್ಟ ಬಿಜೆಪಿ

ಧಾರವಾಡ: 11ನೇ ದಿನದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪೊಲೀಸರಿಂದ ನಡೆದ ಲಾಠಿ ಪ್ರಹಾರ ಖಂಡಿಸಿ ಸೋಮವಾರ ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಜಂಟಿಯಾಗೇ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನರೇಂದ್ರ ಗ್ರಾಮದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯಾವುದೇ ಗಲಾಟೆ ಇರಲಿಲ್ಲ. ಡಿಜೆದಿಂದ ಗದ್ದಲ ನಡೆಯುತ್ತಿದ್ದರೆ ಡಿಜೆಯನ್ನೇ ಬಂದ್ ಮಾಡಿಸಿದ್ದರೆ ಮುಗಿಯುತ್ತಿತ್ತು. ಆದರೆ, ಅಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಹಾಗೂ ಹಿಂದೂ ಸಮುದಾಯದವರ ಮೇಲೆ ದಬ್ಬಾಳಿಕೆ ನಡೆಸುವುದಕ್ಕಾಗಿ ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರೇ ಕುಳಿತ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಪ್ರತಿಭಟನೆ ಕೈಬಿಡಿ ಎಂದು ಡಿವೈಎಸ್‌ಪಿ ಶಿವಾನಂದ ಕಟಗಿ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಅವರ ಮಾತಿಗೆ ಕಿವಿಗೊಡದ ಪ್ರತಿಭಟನಾಕಾರರು, ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್. ಎಸ್. ಕಮತಗಿ ಹಾಗೂ ಅಲ್ಲಿನ ಬೀಟ್ ಪೊಲೀಸ್ ಸೈಯದ್ ಎಂಬಾತನನ್ನು ಅಮಾನತ್ತು ಮಾಡಬೇಕು. ಅಮಾನತ್ತು ಆದೇಶ ಮಾಡಿದರೆ ಮಾತ್ರ ಪ್ರತಿಭಟನೆ ಕೈಬಿಡುವುದಾಗಿ ಸ್ಪಷ್ಟಪಡಿಸಿದರು. ಮಾಜಿ ಶಾಸಕ ದೇಸಾಯಿ ಅವರು ಎಸ್‌ಪಿ ಗುಂಜನ್ ಅವರೊಂದಿಗೆ ದೂರವಾಣಿ ಮೂಲಕವೂ ಮಾತನಾಡಿ ಒತ್ತಾಯ ಮಾಡಿದರು. ಕೊನೆಗೆ ಇಬ್ಬರನ್ನೂ ಅಮಾನತ್ತು ಮಾಡಲು ಎರಡು ದಿನ ಗಡುವು ನೀಡಿ ತಮ್ಮ ಪ್ರತಿಭಟನೆ ಕೈಬಿಟ್ಟರು.

ಇನ್‌ಸ್ಪೆಕ್ಟರ್ ಕಮತಗಿ ಕಾಂಗ್ರೆಸ್ ಏಜೆಂಟ್‌ರಂತೆ ವರ್ತನೆ ಮಾಡುತ್ತಿದ್ದಾರೆ. ಅಲ್ಲಿನ ಬೀಟ್ ಪೊಲೀಸ್ ಸೈಯದ್, ನರೇಂದ್ರದಲ್ಲಿ ಏನೂ ಆಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಎಂದು ನರೇಂದ್ರ ಗ್ರಾಮದ ಯುವಕರಿಗೆ ಒತ್ತಡ ಹಾಕುತ್ತಿದ್ದಾನೆ. ಎರಡು ದಿನದಲ್ಲಿ ಅವರ ಅಮಾನತ್ತು ಆಗಬೇಕು. ಇಲ್ಲದೇ ಹೋದರೆ ಈ ಸಂಬಂಧ ನಾವು ಇನ್ನೂ ಉಗ್ರ ಹೋರಾಟಕ್ಕೆ ಮಂದಾಗಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಮುಖಂಡ ಜಯತೀರ್ಥ ಕಟ್ಟಿ ಎಚ್ಚರಿಸಿದರು.

ಒಟ್ಟಾರೆ ನರೇಂದ್ರ ಗ್ರಾಮದದಲ್ಲಿ ನಡೆದ ಲಘು ಲಾಠಿ ಪ್ರಹಾರ ಇದೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2025 03:46 pm

Cinque Terre

45.4 K

Cinque Terre

7

ಸಂಬಂಧಿತ ಸುದ್ದಿ