", "articleSection": "Crime,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1757331337-010~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿ ಇದು Very sensitive ಏರಿಯಾ... ಹುಬ್ಬಳ್ಳಿಯ 11 ದಿನದ ಗಣಪತಿ ವಿಸರ್ಜನೆ ನೋಡಲು ರಾಜ್ಯದ ಮೂಲೆ ಮೂಲೆಗಳಿಂ...Read more" } ", "keywords": "Hubli-Dharwad police,big salute,Ganeshotsav,Eid Milad,safe celebration,police security,communal harmony,local news,Karnataka,twin cities", "url": "https://dashboard.publicnext.com/node" } ಹು-ಧಾ ಪೊಲೀಸ್ರಿಗೊಂದು ಬಿಗ್ ಸೆಲ್ಯೂಟ್, ಖಾಕಿ ಪಡೆಯಿಂದ ಸುರಕ್ಷಿತವಾಗಿ ನಡೆಯಿತು ಗಣೇಶೋತ್ಸವ, ಈದ್ ಮಿಲಾದ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಪೊಲೀಸ್ರಿಗೊಂದು ಬಿಗ್ ಸೆಲ್ಯೂಟ್, ಖಾಕಿ ಪಡೆಯಿಂದ ಸುರಕ್ಷಿತವಾಗಿ ನಡೆಯಿತು ಗಣೇಶೋತ್ಸವ, ಈದ್ ಮಿಲಾದ್

ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿ ಇದು Very sensitive ಏರಿಯಾ... ಹುಬ್ಬಳ್ಳಿಯ 11 ದಿನದ ಗಣಪತಿ ವಿಸರ್ಜನೆ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಆದ್ರೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್‌‌ಗೆ ಇದೊಂದು ದೊಡ್ಡ ಚಾಲೆಂಜ್ ಆಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿ, ಶಾಂತಿಯನ್ನು ಕಾಪಾಡಿದ್ದಾರೆ. ಪೊಲೀಸರ ಕಾರ್ಯ ನೋಡಿದ್ರೆ ಸೆಲ್ಯೂಟ್ ಮಾಡಬೇಕೆನಿಸುತ್ತದೆ.

ಹೌದು,,,, ಗಣಪತಿ ಹಬ್ಬ ಬಂತಂದ್ರೆ ಸಾಕು ತಮ್ಮ ಕುಟುಂಬ ಬಿಟ್ಟು ಬಂದೋಬಸ್ತ್ಗೆ ಬರುತ್ತಾರೆ. ಯಾವುದೇ ಅಂಜಿಲ್ಲದೇ ಅಳುಕಿಲ್ಲದೇ ಹಬ್ಬದಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಸುರಕ್ಷತೆಯನ್ನು ನೀಡುತ್ತಾರೆ. ಯಾಕಂದ್ರೆ ಅಷ್ಟೊಂದು ಕಾಳಜಿ ಹಾಗೂ ಕರ್ತವ್ಯ ನಿಷ್ಠೆ ಅವರದ್ದು. ಹುಬ್ಬಳ್ಳಿಗೆ 11 ದಿನದ ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನರು ಸೇರುತ್ತಾರೆ. ಯಾರು ಎಲ್ಲಿಂದ ಬಂದಿದ್ದಾರೆ ಎಂಬುದು ತಿಳಿಯುವುದಿಲ್ಲ. ಯಾವುದೇ ರೀತಿಯ ಘಟನೆಗಳು ನಡೆಯದಂತೆ ಹೆಜ್ಜೆ ಹೆಜ್ಜೆಗೂ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ. ಇನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಒಂದು ಕೈ ಮೇಲೇ ಇದ್ದಾರೆ. ಯಾಕಂದ್ರೆ ಲಕ್ಷಾಂತರ ಜನರ ಸುರಕ್ಷತೆಯನ್ನ ಕಾಪಾಡಿದ್ದಾರೆ. ಯಾವುದೇ ಗದ್ದಲ ಆಗದೇ ನೋಡಿಕೊಂಡಿದ್ದಾರೆ. ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಪೊಲೀಸ್ ಇಲಾಖೆಗೆ ಬಹಳ ದೊಡ್ಡ ಸವಾಲಾಗಿತ್ತು. ಎಲ್ಲೆಡೇ ಹಿಂದೂ ಮುಸ್ಲಿಂ ಸಮುದಾಯದವ್ರು ಎಲ್ಲರೂ ಒಂದೇ ಎಂಬ ಭಾವೈಕ್ಯತೆಯಿಂದ ಹಬ್ಬ ಆಚರಣೆ ಮಾಡಿದ್ದಾರೆ.

ಇನ್ನು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹಾಗೂ ಡಿಸಿಪಿ ಮಹಾನಿಂಗ‌ ನಂದಗಾವಿ ತಂಡ ಬಹಳ ಮುತುವರ್ಜಿಯಿಂದ ಕರ್ತವ್ಯ ವಹಿಸಿದ್ದಕ್ಕೆ, ಈಗ ಹುಬ್ಬಳ್ಳಿ ಧಾರವಾಡ ಅಷ್ಟೇ ಅಲ್ಲದೇ ರಾಜ್ಯದ ಜನರು ಸಹ ಪೊಲೀಸರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೇ ಒಂದು" ಚಿಕ್ಕ ಘಟನೆ ಆಗದಂತೇ‌ ನೋಡಿಕೊಂಡಿದ್ದು ಬಹಳ ವಿಶೇಷವಾಗಿದೆ. ಇದನ್ನೆಲ್ಲಾ ನೋಡಿದ್ರೆ ಪೊಲೀಸರಿಗೆ ಬಿಗ್ ಸೆಲ್ಯೂಟ್ ಮಾಡಲೇಬೇಕು.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Suman K
Kshetra Samachara

Kshetra Samachara

08/09/2025 05:05 pm

Cinque Terre

10.98 K

Cinque Terre

3

ಸಂಬಂಧಿತ ಸುದ್ದಿ