", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/454738-1757406374-New-(1280-x-720-px)-(2).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Harish.K" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜನಾಪುರದಲ್ಲಿ ನಿನ್ನೆ ರಾತ್ರಿ ಸಿಗರೇಟಿಗೆ ಹಣ ಕೇಳಿದ್ದಕ್ಕೆ ರೌಡಿಶೀಟರ್ ಯುವಕರು ಅಂಗಡಿ ಮ...Read more" } ", "keywords": "Shopkeeper beats customer over cigarette dispute in Bengaluru", "url": "https://dashboard.publicnext.com/node" }
ಬೆಂಗಳೂರು : ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜನಾಪುರದಲ್ಲಿ ನಿನ್ನೆ ರಾತ್ರಿ ಸಿಗರೇಟಿಗೆ ಹಣ ಕೇಳಿದ್ದಕ್ಕೆ ರೌಡಿಶೀಟರ್ ಯುವಕರು ಅಂಗಡಿ ಮಾಲೀಕನ ಮೇಲೆ ಖಾರದ ಪುಡಿ ಎಸೆದು, ಗ್ಲಾಸ್ ಪುಡಿ ಮಾಡಿದ ದಾಂಧಲೆ ನಡೆಸಿದ ಘಟನೆ ನಡೆದಿದೆ.
ಸುಮಾರು 15 ಜನರ ಗುಂಪು ಮೂರು ಆಟೋಗಳಲ್ಲಿ ಮಚ್ಚು ಮತ್ತು ಲಾಂಗ್ ಹಿಡಿದು ಬಂದು ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್ ಮೇಲೆ ದಾಳಿ ನಡೆಸಿದ್ದಾರೆ. ರಾತ್ರಿ 9.15ರ ಸುಮಾರಿಗೆ ಮೂವರು ಪುಂಡರು ಅಂಗಡಿಗೆ ಬಂದು ಸಿಗರೇಟು ತೆಗೆದುಕೊಂಡಿದ್ದು, ಮಾಲೀಕರು ಹಣ ಕೇಳಿದಾಗ ಅಲ್ಲಿಂದ ಹೊರಟಿದ್ದಾರೆ.
ನಂತರ 15 ನಿಮಿಷ ಬಿಟ್ಟು ಮತ್ತೆ ಮೂರು ಆಟೋಗಳಲ್ಲಿ ಬಂದು, ಅಂಗಡಿಯ ಗಾಜಿನ ಸಾಮಗ್ರಿಗಳನ್ನು ಒಡೆದು ಹಾಕಿ ಮಾಲೀಕರನ್ನು ಮಚ್ಚು-ಲಾಂಗ್‌ಗಳಿಂದ ಬೆದರಿಸುವ ಯತ್ನ ಮಾಡಿದ್ದಾರೆ. ಈ ವೇಳೆ ಮಾಲೀಕರ ತಮ್ಮನ ಕಣ್ಣಿಗೆ ಖಾರದ ಪುಡಿ ಎಸೆದು ಪುಂಡಾಟ ನಡೆಸಲಾಗಿದೆ.
ತಕ್ಷಣ ಮಾಲೀಕರು 112ಕ್ಕೆ ಕರೆಮಾಡಿದ ಹಿನ್ನೆಲೆಯಲ್ಲಿ ಹೊಯ್ಸಳ ಸ್ಥಳಕ್ಕೆ ಧಾವಿಸಿದರೆ, ಆರೋಪಿಗಳ ಬಹುಪಾಲು ಪರಾರಿಯಾಗಿದ್ದು, ಈ ನಡುವೆ ಮೂರು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
PublicNext
09/09/2025 01:57 pm