ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ: ಭಾರತದಲ್ಲಿ ಸರ್ವ ಸ್ವಾವಲಂಬಿಗಳು ವಿಶ್ವಕರ್ಮಸಮಾಜ ಮಾತ್ರ.

ಕಟಪಾಡಿ: ವ್ಯಕ್ತಿ, ದೇಶ ಮತ್ತು ಸಮಾಜಪರಾವಲಂಬನೆ ಇಲ್ಲದೆ ಸಾಧ್ಯವಾದಷ್ಟು ಸ್ವಾವಲಂಬಿಯಾದರೇ ಮಾತ್ರ ಸಾಧನೆ ಎನ್ನುವುದನ್ನು ಕಾಪುವಿಧಾನಸಭಾ ಕ್ಷೇತ್ರದ ವಿಶ್ವಬ್ರಾಹ್ಮಣ ಯುವಸಂಘಟನೆಯ ದಶಮಾನೋತ್ಸವದ ಅಂಗವಾಗಿ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಜರುಗಿದ 12 ಜೋಡಿ ಸಾಮೂಹಿಕ ವಿವಾಹ ಸಾಕ್ಷಿಯಾಗಿದೆ.

ವಿವಾಹದ ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಜಾತ್ಯಾತೀತ ಜನತಾದಳದ ಉಡುಪಿ ಜಿಲ್ಲಾ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಮಾತನಾಡಿಸ್ವತಂತ್ರ ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಎಲ್ಲಾ ಜನರಿಗೂ ಎಲ್ಲಾ ಕಾಲದಲ್ಲೂ ಶಿಲ್ಪ,ವೈದಿಕ,ಕಲೆ ಸೇರಿದಂತೆ ಎಲ್ಲಾ ವಿಧದ ಸ್ವಾವಲಂಬಿಗಳು ವಿಶ್ವಕರ್ಮ ಸಮಾಜ ಮಾತ್ರವಾಗಿದ್ದು ಇದು ದೇಶಕ್ಕೆ ಮಾದರಿ ಎಂದರು.ಅಂದು ನಡೆದ ವಿವಾಹ ಕಾರ್ಯವನ್ನು ವಿಧಿವತ್ತಾಗಿ ನಡೆಸಿದ 60 ಮಂದಿ ವಿಶ್ವಕರ್ಮ ವೈದಿಕರು,ವಾದ್ಯಗಾರ್ತಿವಿಶ್ವಕರ್ಮ ಮಹಿಳೆ, ಸಹಸ್ರಾರು ಮಂದಿಗೆ ಭೋಜನ ವ್ಯವಸ್ಥೆಕೂಡಾ ವಿಶ್ವಕರ್ಮ ಸಮಾಜದವರಿಂದಲೇ ನಡೆದುದು ಕೂಡಾ ಕಾರಣವಾಗಿದೆ.

ಸಂಘಟನೆಯುಹತ್ತು ವರ್ಷದಲ್ಲಿ ಈ ತನಕ ಸಮಾಜದ 48 ಜೋಡಿಗಳಿಗೆ ವಿವಾಹ ಕಾರ್ಯಸೇರಿದಂತೆ ಅಶಕ್ತರಿಗೆ ಆರ್ಥಿಕ ನೆರವು, ಗೃಹ ನಿರ್ಮಾಣ ನೆರವೇರಿಸಿದೆ.

Edited By : Suman K
Kshetra Samachara

Kshetra Samachara

13/12/2025 01:08 pm

Cinque Terre

2.91 K

Cinque Terre

0

ಸಂಬಂಧಿತ ಸುದ್ದಿ