ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ತಾಂಬೂಲದಲ್ಲಿ ಕಂಡು ಬಂದ ಪ್ರಾಯಶ್ಚಿತ್ತ ಹೋಮ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ, ಗಣಯಾಗ, ಮಹಾ ಮೃತ್ಯುಂಜಯ ಹೋಮ, ಪ್ರಸಾದ ವಿತರಣೆ
ಮಧ್ಯಾಹ್ನ 11 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆದು ಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಿತು.
ಸಂಜೆ ಮಹಾ ಸುದರ್ಶನ ಯಾಗ, ಅಘೋರಹೋಮ, ಪಾದ ಆಕರ್ಷಣೆ ಪ್ರಾಯಶ್ಚಿತ್ತ ಹೋಮಗಳು ನಡೆಯಲಿದೆ
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಂದನ ಶೆಟ್ಟಿ ಕುಬೆವೂರು, ಶಶಿಕಲಾ ಎನ್ ಕುಂದರ್, ಶಾಂತರಾಮ ಶೆಟ್ಟಿ ತೆಂಗಾಳಿ, ಅರುಣ್ ಕುಮಾರ್ ಕಟ್ಟಪುಣಿ, ಉದ್ಯಮಿ ಜಯಕರ ಶೆಟ್ಟಿ,ತೇಜರಾಜ ಶೆಟ್ಟಿ,ಬಾಲಕೃಷ್ಣ ಶೆಟ್ಟಿ ಅಂಬೆ ಲಬೀಡು,ವಿಠಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/12/2025 02:46 pm
LOADING...