ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಭಾಗವಹಿಸಿದ್ದ ಗೀತಾ ಪಾರಾಯಣಕ್ಕೆ ಯೋಗಿ ಮೆಚ್ಚುಗೆ: ಉಡುಪಿ ಭೇಟಿಯ ಹಿಂದಿನ ಮಹತ್ವ!

ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಪಾದರ ವಿಶ್ವ ಗೀತಾ ಪರ್ಯಾಯದ ಸಂದರ್ಭದಲ್ಲಿ ಇದೇ ಡಿಸೆಂಬರ್ 27 ರಂದು ಅರ್ಪಿಸಲ್ಪಡುವ ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವದಲ್ಲಿ ಅಭ್ಯಾಗತರಾಗಿ ಭಾಗಿಯಾಗುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಲಕ್ನೋ ನಗರದ ಅವರ ನಿವಾಸದಲ್ಲಿ ಮಠದ ವತಿಯಿಂದ ಆಮಂತ್ರಿಸಲಾಯಿತು.

ಇತ್ತೀಚಿಗೆ ಪ್ರಧಾನಮಂತ್ರಿ ಮೋದಿ ಭಾಗವಹಿಸಿ ಅತ್ಯಂತ ಯಶಸ್ವಿಯಾದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಬಗ್ಗೆ ವಿಚಾರಿಸಿ ಯೋಗೀಜಿ ಸಂತಸ ಪಟ್ಟರು.

ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಹಾಗೂ ಜನಪ್ರಿಯ ಹಿರಿಯ ಪತ್ರಕರ್ತ ಶ್ರೀ ರವೀಂದ್ರ ಜೋಶಿಯವರು ಕಾರ್ಯಕ್ರಮದ ವಿವರಗಳನ್ನು ಆದಿತ್ಯನಾಥ್ ಅವರಿಗೆ ನೀಡಿದರು.

ಯೋಗಿಯವರು ಇಷ್ಟರಲ್ಲಿಯೇ ಉಡುಪಿಗೆ ಆಗಮಿಸಲಿದ್ದಾರೆ ಎಂದು ಕೃಷ್ಣಮಠದ ಪ್ರಕಟಣೆ ತಿಳಿಸಿದೆ.

Edited By :
PublicNext

PublicNext

16/12/2025 10:48 pm

Cinque Terre

2.64 K

Cinque Terre

0

ಸಂಬಂಧಿತ ಸುದ್ದಿ