ಬೆಳಗಾವಿ: ವಿಧೇಯಕಗಳ ಅಂಗೀಕಾರಕ್ಕೆ ವಿಧೇಯಕಗಳು ಮಂಡನೆ ಆದ ಸಂದರ್ಭದಲ್ಲಿ ವಿಧೇಯಕಗಳ ಪರಿಭಾಷೆಯು ಕ್ಲಿಷ್ಟಕರವಾಗಿದ್ದು, ವಿಧೇಯಕಗಳ ಕನ್ನಡವನ್ನು ಸರಳೀಕರಣಗೊಳಿಸಬೇಕು ಎಂದು ಹಲವು ಶಾಸಕರು ಅಭಿಪ್ರಾಯ ಪಟ್ಟರು.
ಶಾಸಕರ ಅಭಿಪ್ರಾಯ ಆಲಿಸಿದ ಸಭಾಧ್ಯಕ್ಷರಾದ ಯು. ಟಿ .ಖಾದರ್ ವಿಧೇಯಕಗಳ ಕುರಿತು ಚರ್ಚೆ ಮಾಡಲಿಕ್ಕೆ ಶಾಸಕರು ಆಸಕ್ತಿ ಬೇಕು ಎಂದು ಹೇಳಿದರು. ವಿಧಾಸಭೆಯಲ್ಲಿ ಮಂಡಿಸುವ ವಿಧೇಯಕಗಳ ಬಗ್ಗೆ ಚರ್ಚಿಸಲು ಶಾಸಕರುಗಳು ಆಸಕ್ತಿ ತೋರಿಸಬೇಕು. ವಿಧೇಯಕಗಳನ್ನು ಮಂಡಿಸಿದ ಸಂದರ್ಭದಲ್ಲಿ ವಿಧೇಯಕಗಳ ಕುರಿತು ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳಿಂದ ವಿಧೇಯಕಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ವಿಧೇಯಕವನ್ನು ಮಂಡಿಸಿದಾಗ ಸಂಬಂಧಪಟ್ಟ ಕಚೇರಿಯಿಂದ ಬಿಲ್‍ಗಳ ಕುರಿತು ಪರ್ಯಾಲೋಚಿಸಿ ಚಿಂತಿಸಿ ಚರ್ಚೆ ಮಾಡಬೇಕು ಎಂದು ಶಾಸಕರಿಗೆ ತಿಳಿಸಿದರು.
PublicNext
16/12/2025 07:09 pm
LOADING...