ಕೂಡ್ಲಿಗಿ : RTO ಅಧಿಕಾರಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗ್ತಿದೆ ಅನ್ನೋ ಆರೋಪಗಳು ಸಾಕಷ್ಟು ಪ್ರಮಾಣದಲ್ಲಿ ಕೇಳಿಬರುತ್ತಲೇ ಇವೆ. ಅದೇ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರ್ತಿದ್ದ ವಾಹನ ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿ ಸ್ಪೀಡಾಗಿ ಹೋಗ್ತಿರೋ ವೇಳೆ ಲಾರಿಗೆ ಟಚ್ ಆಗಿದೆ. ಇದ್ರಿಂದ ದೇವಸ್ಥಾನಕ್ಕೆ ತೆರಳಿದ್ದ ವಾಹನದ ಒಂದು ಸಂಪೂರ್ಣ ಡ್ಯಾಮೇಜ್ ಆಗಿದೆ. ಇದ್ರಿಂದ ರೊಚ್ಚಿಗೆದ್ದ ಜನ RTO ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ದೇವಸ್ಥಾನಕ್ಕೆ ಹೋಗಿ ವಾಪಸ್ ಬರ್ತಿದ್ದ ವೇಳೆ RTO ಅಧಿಕಾರಿಗಳ ಯಡವಟ್ಟಿನಿಂದ ವಾಹನಕ್ಕೆ ಡ್ಯಾಮೇಜ್ ಆಗಿದೆ. ಜೊತೆಗೆ ವಾಹನದಲ್ಲಿದ್ದ ಕೆಲವರಿಗೆ ಗಂಭೀರ ಗಾಯ ಆಗಿವೆ. ಇದ್ರಿಂದ ಸಿಟ್ಟಿಗೆದ್ದ ಅಪಘಾತಕ್ಕೆ ಒಳಗಾದ ವಾಹನ ಸವಾರ ವೆಹಿಕಲ್ ನ್ನ ರಾಷ್ಟ್ರೀಯ ಹೆದ್ದಾರಿಗೆ ಅಡ್ಡ ನಿಲ್ಲಿಸಿ RTO ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಾಹನ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಗಟ್ಟಿ ನಿಲ್ಲಿಸಿದ್ರಿಂದ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಇದೇ ರೊಚ್ಚಿಗೆದ್ದು ಮಾತಾಡಿರೋ ಜನ ಕೂಡಲೇ ಇಂತಹ ಕೆಲಸಗಳನ್ನ ಬಿಟ್ಟು ಜನಪರ ಕೆಲಸ ಮಾಡ್ಬೇಕು ಅಂತ ಆಗ್ರಹಿಸಿದ್ರು.
PublicNext
16/12/2025 09:25 pm
LOADING...