ಹೊಸಪೇಟೆ: ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಶಂಕರ್ ನಾಯಕ್ ಅವರ ಮನೆ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಕೋಟಿಗಟ್ಟಲೆ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಕಂತೆ ಕಂತೆ ಹಣ, ಚಿನ್ನಾಭರಣ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ದಾಳಿ ವೇಳೆ, ಡಿಎಚ್‌ಒ ಶಂಕರ್ ನಾಯಕ್ ಒಡೆತನದ 11 ನಿವೇಶನಗಳು ಮತ್ತು 5 ವಾಸದ ಮನೆಗಳು ಪತ್ತೆಯಾಗಿವೆ. ಇವುಗಳ ಒಟ್ಟು ಸ್ಥಿರಾಸ್ತಿ ಮೌಲ್ಯ 4 ಕೋಟಿ 20 ಲಕ್ಷದ 10 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ, 11 ಲಕ್ಷದ 56 ಸಾವಿರದ 500 ರೂಪಾಯಿ ನಗದು, 16 ಲಕ್ಷದ 75 ಸಾವಿರದ 880 ರೂಪಾಯಿ ಮೌಲ್ಯದ ಚಿನ್ನಾಭರಣಗಳು, 9 ಲಕ್ಷದ 60 ಸಾವಿರ ರೂಪಾಯಿ ಮೌಲ್ಯದ ವಾಹನಗಳು ಹಾಗೂ 31 ಲಕ್ಷದ 90 ಸಾವಿರದ 500 ರೂಪಾಯಿ ಮೌಲ್ಯದ ಇತರೆ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಚರಾಸ್ತಿ ಮತ್ತು ಸ್ಥಿರಾಸ್ತಿ ಎರಡನ್ನೂ ಸೇರಿಸಿ, ಒಟ್ಟಾರೆ 4 ಕೋಟಿ 89 ಲಕ್ಷದ 92 ಸಾವಿರದ 880 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಡಿಎಚ್‌ಒ ಶಂಕರ್ ನಾಯಕ್‌ಗೆ ಇಷ್ಟೊಂದು ದೊಡ್ಡ ಪ್ರಮಾಣದ ಆಸ್ತಿ ಎಲ್ಲಿಂದ ಬಂತು, ಅವರ ಆದಾಯದ ಮೂಲ ಯಾವುದು ಎಂಬ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ನಾಳೆ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿರುವ ಅವರ ಮನೆ ಸೇರಿದಂತೆ ಇನ್ನಷ್ಟು ಸ್ಥಳಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಲೋಕಾಯುಕ್ತ ದಾಳಿಯ ಬಳಿಕ ಶಂಕರ್ ನಾಯಕ್ ಕೇವಲ ಆರೋಗ್ಯ ಅಧಿಕಾರಿಯಲ್ಲ, ಬದಲಿಗೆ ಕೋಟಿ ಕುಬೇರ ಎಂಬುದು ಸಾಬೀತಾಗಿದೆ.
Kshetra Samachara
16/12/2025 10:08 pm
LOADING...