ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಗ್ರನ ಎದುರು ನಿಂತ ಹಣ್ಣು ವ್ಯಾಪಾರಿ: ಜೀವ ರಕ್ಷಿಸಿದ ಹೀರೋಗೆ ಜಗತ್ತಿನ ಪ್ರಶಂಸೆ

ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ನಿರಾಯುಧನಾಗಿದ್ದ ಓರ್ವ ಹಣ್ಣು ಮಾರಾಟಗಾರ ಉಗ್ರನ ಎದುರು ನಿಂತು ಅನೇಕ ಜೀವಗಳನ್ನು ರಕ್ಷಿಸಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ. ಪಾಕಿಸ್ತಾನ ಮೂಲದ ಇಬ್ಬರು ದಾಳಿಕೋರರು ಮನಬಂದಂತೆ ಗುಂಡು ಹಾರಿಸಿದ್ದರಿಂದ 12ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡ ಈ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು.

ಈ ಭೀಕರ ದಾಳಿಯ ಮಧ್ಯೆ, 43 ವರ್ಷದ ಅಹ್ಮದ್ ಅಲ್ ಅಹ್ಮದ್ ಎಂಬ ಹಣ್ಣು ವ್ಯಾಪಾರಿ ಭಯವನ್ನೇ ಬದಿಗೊತ್ತಿ ಉಗ್ರನ ವಿರುದ್ಧ ಹೋರಾಡಿದರು. ಗುಂಡಿನ ಸದ್ದು ಕೇಳಿ ಜನರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದಾಗ, ಯಾವುದೇ ಆಯುಧವಿಲ್ಲದೆ ಅಹ್ಮದ್ ದಾಳಿಕೋರನ ಮೇಲೆ ಧೈರ್ಯದಿಂದ ಹಾರಿ, ಅವನ ಕೈಯಲ್ಲಿದ್ದ ರೈಫಲ್ ಅನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಈ ಸಾಹಸದ ವೇಳೆ ಅವರಿಗೆ ಎರಡು ಬಾರಿ ಗುಂಡು ತಗುಲಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಅಹ್ಮದ್ ಅವರ ಧೈರ್ಯಕ್ಕೆ ಜಗತ್ತಿನಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಅವರ ನೆರವಿಗಾಗಿ GoFundMe ಅಭಿಯಾನವನ್ನೂ ಆರಂಭಿಸಲಾಗಿದ್ದು, ಸರಿಸುಮಾರು 2 ಮಿಲಿಯನ್ ಡಾಲರ್‌ಗಳಷ್ಟು ದೇಣಿಗೆ ಸಂಗ್ರಹವಾಗಿದೆ. 33 ಸಾವಿರಕ್ಕೂ ಹೆಚ್ಚು ಜನರು ಈ ಅಭಿಯಾನಕ್ಕೆ ಹಣ ನೀಡಿದ್ದಾರೆ ಎಂದು ವರದಿಯಾಗಿದೆ.

ಸಿಡ್ನಿಯ ಸದರ್ಲ್ಯಾಂಡ್ ಪ್ರದೇಶದಲ್ಲಿ ಹಣ್ಣಿನ ಅಂಗಡಿ ನಡೆಸುತ್ತಿರುವ ಅಹ್ಮದ್, ದಾಳಿಯ ಸಮಯದಲ್ಲಿ ಆಕಸ್ಮಿಕವಾಗಿ ಬೊಂಡಿ ಬೀಚ್ ಬಳಿ ಹಾದುಹೋಗುತ್ತಿದ್ದರು. ಘಟನೆ ನಡೆದ ಪ್ರದೇಶವನ್ನು ಪೊಲೀಸರು ಸೀಲ್ ಮಾಡಿ ತನಿಖೆ ನಡೆಸುತ್ತಿದ್ದು, ಸದ್ಯಕ್ಕೆ ಯಾವುದೇ ಹೊಸ ಭದ್ರತಾ ಬೆದರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Edited By :
PublicNext

PublicNext

16/12/2025 10:28 pm

Cinque Terre

5.24 K

Cinque Terre

1

ಸಂಬಂಧಿತ ಸುದ್ದಿ