ಬೆಳಗಾವಿ: ಕಲಾವಿದರ ಮಾಸಾಶನದ ವಯಸ್ಸು ಈಗಿರುವ 58 ನಿಯಮ ಸಡಿಲಿಸಿ ವಯೋಮಿತಿಯನ್ನು 50 ಕ್ಕೆ ಇಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಲಾವಿದರ ಸಾಂಸ್ಕೃತಿಕ ಸಂಘಟನೆಯಿಂದ ಇಲ್ಲಿನ ಸುವರ್ಣ ಗಾರ್ಡನ್ ದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ಕಲಾವಿದರಿಗೆ ಈಗ ನೀಡುತ್ತಿರುವ 2500 ಮಾಸಾಶನವನ್ನು 5 ಸಾವಿರಕ್ಕೆ ಹೆಚ್ಚಿಸಬೇಕು, ಬೀದಿನಾಟಕ ಕಲಾವಿದರ ಪ್ರತ್ಯೇಕ ಬೀದಿನಾಟಕ ಅಕಾಡೆಮಿ ಸ್ಥಾಪಿಸುವುದು, ವಿವಿಧ ಇಲಾಖೆಗಳ ಮುಖಾಂತರ ಹೆಚ್ಚಿನ ಬೀದಿನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು,ಜಾನಪದ ಅಕಾಡೆಮಿ,ಸಾಹಿತ್ಯ ಅಕಾಡೆಮಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಕಲಾವಿದರು ಆಗ್ರಹಿಸಿದರು. ಬಸವರಾಜ ಸಾನಕ್ಕನವರ,ಕರಬಸಪ್ಪ ಪೂಜಾರಿ, ಗೀತಾಬಾಯಿ ಲಮಾಣಿ, ರೇಣುಕಾ ಗೊರಮಟ್ಟಿ ಇತರರಿದ್ದರು.
PublicNext
16/12/2025 10:42 pm
LOADING...