ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಭಾರತೀಯರ ರಕ್ಷಣೆಗೆ ಯೋಧರ ಪರಿಶ್ರಮ ಶ್ಲಾಘನೀಯ- ಅನಿಲ್ ಕುಮಾರ್

ಮುಲ್ಕಿ: ಭಾರತೀಯರ ರಕ್ಷಣೆಗೆ ಹಗಲು ಇರುಳೆನ್ನದೆ ಗಡಿ ಕಾಯುವ ಯೋಧರ ಪರಿಶ್ರಮ ಶ್ಲಾಘನೀಯ ಎಂದು ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ ನ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದರು. ಅವರು ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ನ ವತಿಯಿಂದ ಮುಲ್ಕಿ ಸಂಪದ ಅತಿಕಾರಿಬೆಟ್ಟು ಗ್ರಾಮದ ಕೃಷಿಕ ಹಾಗೂ ಭಾರತೀಯ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ ಮಾಜೀ ಸೈನಿಕ ಶಶಿಧರ ಎಸ್ ಶೆಟ್ಟಿ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ನ.ಪಂ ಅಧ್ಯಕ್ಷ ಸತೀಶ್ ಅಂಚನ್ ,ಅತಿಕಾರಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸಂಸ್ಥೆಯ ಕಾರ್ಯದರ್ಶಿ ಅಶ್ವಿನಿ ಎಸ್ ಕೋಶಾಧಿಕಾರಿ ಸಂತೋಷ್ ಕುಮಾರ್ ,ಮಾಜೀ ಅಧ್ಯಕ್ಷ ಬಿ ಶಿವಪ್ರಸಾದ್ ಪ್ರಣವ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

17/12/2025 04:56 pm

Cinque Terre

1.01 K

Cinque Terre

0

ಸಂಬಂಧಿತ ಸುದ್ದಿ