ಬಜಪೆ: ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಿಸಿದ ದೈವಗಳ ಭಂಡಾರಮನೆಯಾದ ಕಾವರಮನೆಯ ಕಂಬಳದ ಗದ್ದೆಯಲ್ಲಿ ಸಾಂಪ್ರದಾಯಿಕ ಪೂಕರೆ ಕಂಬಳವು ಅದ್ದೂರಿಯಾಗಿ ಜರುಗಿತು.
ಧಾರ್ಮಿಕ ವಿಧಿವಿಧಾನಗಳನ್ನು ಸದಾನಂದ ಮೊೖಲಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮಕಾವ), ರತ್ನಾಕರ ಶೆಟ್ಟಿ ಬಡಕರೆ, ಸಂಪತ್ ಶೆಟ್ಟಿ ನಡ್ಯೋಡಿಗುತ್ತು, ಮಹೇಂದ್ರ ಶೆಟ್ಟಿ ಕಾವರಮನೆ, ಎಕ್ಕಾರು ಗ್ರಾ.ಪಂ. ಅಧ್ಯಕ್ಷ ಪ್ರವೀಣ ಆಚಾರ್ಯ, ಸದಸ್ಯ ಸುದೀಪ್ ಅಮೀನ್ ಹಾಗೂ ತಾ.ಪಂ. ಮಾಜಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Kshetra Samachara
19/12/2025 10:35 am
LOADING...