ಬೆಂಗಳೂರು: ಕಾರಾಗೃಹದ ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಲೋಕ್ ಕುಮಾರ್ ಅವರು ಜೈಲಿಗೆ ದಿಢೀರ್ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ. ಈ ಕುರಿತು 'ಪಬ್ಲಿಕ್ ನೆಕ್ಸ್ಟ್' ಜೊತೆ ಎಕ್ಸ್‌ಕ್ಲೂಸಿವ್ ಮಾತುಕತೆ ನಡೆಸಿದ್ದಾರೆ.
ಅಲೋಕ್ ಕುಮಾರ್, ನಟ ದರ್ಶನ್ ಇರುವ ಬ್ಯಾರಕ್‌ಗೆ ಖುದ್ದಾಗಿ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಒಂದು ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ... ದರ್ಶನ್ ಅವರ ಆಪ್ತ ಸ್ನೇಹಿತ ಹಾಗೂ ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್, ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮೊದಲಿನಿಂದಲೂ ಪರಿಚಿತನಾಗಿದ್ದು, ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ದರ್ಶನ್ ಮತ್ತು ಪ್ರದೋಷ್ ನ ಮಾತನಾಡಿಸಿದ ಅಲೋಕ್ ಕುಮಾರ್, ಈ ರೀತಿ ಯಾಕೆ ಮಾಡೋಕೆ ಹೋದ್ರಿ? ಎಂದು ಬುದ್ಧಿ ಹೇಳಿದ್ರಂತೆ.
ಅಲೋಕ್ ಕುಮಾರ್ ಅವರ ಅನಿರೀಕ್ಷಿತ ಎಂಟ್ರಿಯಿಂದ ಜೈಲಿನ ಕೈದಿಗಳು ಒಂದು ಕ್ಷಣ ಬೆಚ್ಚಿಬಿದ್ದಿದ್ದು, ಕೆಲವರು ಅಲೋಕ್ ಕುಮಾರ್ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ವಿಶೇಷ ಅಂದ್ರೆ ಅಲೋಕ್ ಕುಮಾರ್ ಬಂಧಿಸಿದ್ದ ಕೆಲ ಕೈದಿಗಳು ಈ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
PublicNext
18/12/2025 07:57 pm
LOADING...