ಬೆಂಗಳೂರು: ಶಿಲ್ಪಾ ಶೆಟ್ಟಿ ಪಬ್ ಗಲಾಟೆ ಬೆನ್ನಲ್ಲೇ ನಗರದ ಮತ್ತೊಂದು ಪಬ್ ನಲ್ಲಿ ಕಿರಿಕ್ ನಡೆದಿದೆ. ಮಾಜಿ ಸಚಿವರ ಆಪ್ತ ಎಂದು ಬಿಂಬಿಸಿಕೊಂಡಿರೋ ವ್ಯಕ್ತಿ ಪಬ್‌ನಲ್ಲಿ ಯುವತಿಯರೊಂದಿಗೆ ಕೀಟಲೆ ಮಾಡಿ ಅಸಭ್ಯ ವರ್ತನೆ ತೋರಿರೋದಾಗಿ ಆರೋಪ ಕೇಳಿ ಬಂದಿದೆ.
ಮಾಜಿ ಸಚಿವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರಿಂದ ಪಬ್ನಲ್ಲಿ ಯುವತಿಯರೊಂದಿಗೆ ಕೀಟಲೆ ಹಾಗೂ ಅಸಭ್ಯ ವರ್ತನೆ ನಡೆದಿರುವುದು ಬೆಳಕಿಗೆ ಬಂದಿದೆ. ಮಧ್ಯರಾತ್ರಿ 12:30ರ ಸುಮಾರಿಗೆ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾಗರಬಾವಿಯ ವ್ಯಾಪ್ತಿಯಲ್ಲಿರುವ 'ಸೈಕಲ್ ಗ್ಯಾಪ್' ಪಬ್‌ನಲ್ಲಿ ಮಧ್ಯರಾತ್ರಿ 12:30ರ ಸುಮಾರಿಗೆ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಕೆಲ ಯುವತಿಯರ ಬಳಿ ಅವರ ಫೋನ್ ನಂಬರ್ ಕೇಳಿ ಕೀಟಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಯುವತಿಯರು ನಂಬರ್ ನೀಡಲು ನಿರಾಕರಿಸಿದಾಗ, ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರಂತೆ. ಯುವತಿಯರು ಎಂದು ಸಹ ನೋಡದೆ ಅವರನ್ನು ಎಳೆದಾಡಿ ತೊಂದರೆ ನೀಡಿದ್ದಾರೆ. ಜಯಂತ್ ಫೌಂಡೇಷನ್ ಅಧ್ಯಕ್ಷ ಉಮೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗ್ತಿದೆ.
ಈ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ಯುವತಿಯರು ಠಾಣೆಗೆ ದೂರು ನೀಡಿದ್ದಾರೆ. ಕುಡಿತದ ಮತ್ತಿನಲ್ಲಿ ಕೀಟಲೆ ಮಾಡಿದ ಚೌಟ್ರಿ ಉಮೇಶ್ ಎಂಬಾತನನ್ನು ಜ್ಞಾನಭಾರತಿ ಪೊಲೀಸರು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ. ಆರ್‌ಆರ್ ನಗರದಲ್ಲಿ 'ಚೌಟ್ರಿ ಉಮೇಶ್' ಎಂದೇ ಪ್ರಖ್ಯಾತನಾಗಿರುವ ಈತ ಮಾಜಿ ಸಚಿವರ ಶಿಷ್ಯ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಯುವತಿಯರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
18/12/2025 08:15 pm
LOADING...