ಮುಲ್ಕಿ: ಕಿಲ್ಪಾಡಿ ಎಂ ಸಿ ಟಿ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಅಂತರ್ ಪ್ರೌಢಶಾಲಾ ಸ್ಪರ್ಧೆ ಪ್ರತಿಭಾಂಗಣ ಕಾರ್ಯಕ್ರಮ ನಡೆಯಿತು
ಮುಲ್ಕಿ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಪರ್ಧೆಯ ಮೂಲಕ ಮಕ್ಕಳ ಪ್ರತಿಭೆ ಅನಾವರಣ ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೇಮ್ಸ್ ಡಿಸೋಜಾ ಮಾತನಾಡಿ ಪ್ರತಿಭಾಂಗಣ ಸ್ಪರ್ಧೆಯ ಮೂಲಕ ಮಕ್ಕಳಿಗೆ ದೇಶಭಕ್ತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.ಮುಕ್ಕ ಶ್ರೀನಿವಾಸ್ ಮೆಡಿಕಲ್ ಸೈನ್ಸ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಐಶ್ವರ್ಯ ಭಟ್ ಪಿ . ಮಾತನಾಡಿ ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕಾರ್ಯಕ್ರಮಗಳು ಸಹಕಾರಿ ಎಂದರು.
ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ತೀರ್ಪುಗಾರರಾದ ಅನಿತಾ ಶೆಟ್ಟಿ ಮೂಡಬಿದ್ರೆ ಸೌಮ್ಯ ಆರ್ ಶೆಟ್ಟಿ ಸೂರಜ್ ಶೆಟ್ಟಿ , ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಬಿ. ಖಾನ್ ಶಾಲಾ ಸಂಚಾಲಕ ಹಾಜಿ ಎಚ್. ಅಬೂಬಕ್ಕರ್ ಆಡಳಿತ ಮಂಡಳಿಯ ಕಾರ್ಯದರ್ಶಿ ಉಮರ್ ಫಾರೂಕ್ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಸಿರಾಜ್ ,ಶಾಲಾ ಮುಖ್ಯೋಪಾಧ್ಯಾಯ ಹರೀಶ್ ಉಪಸ್ಥಿತರಿದ್ದರು.
ರಕ್ಷಿತಾ ಮತ್ತು ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.
Kshetra Samachara
19/12/2025 03:18 pm
LOADING...