ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಷೇರುಮಾರುಕಟ್ಟೆ ರೀಲ್ಸ್ ತೆರೆದು 13 ಲಕ್ಷ ರೂ. ಕಳೆದುಕೊಂಡ ಯುವಕ !

ಸಿದ್ದಾಪುರ: ಸಾಮಾಜಿಕ ಜಾಲತಾಣದಲ್ಲಿ ಷೇರು ಮಾರುಕಟ್ಟೆ ರೀಲ್ಸ್ ಓಪನ್ ಮಾಡಿ ಯುವಕನೊಬ್ಬ ಅಂದಾಜು 13 ಲಕ್ಷ ರೂ.ಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಹೈಕಾಡಿ ವಿಶ್ವನಾಥ ಕುಲಾಲ (38) ಹಣವನ್ನು ಕಳೆದುಕೊಂಡವರು. ಅವರು ಫೇಸ್‌ಬುಕ್ SBICAP Securities ಷೇರುಮಾರುಕಟ್ಟೆ ರೀಲ್ಸ್ ಅನ್ನು ಓಪನ್ ಮಾಡಿ, ಅದರಲ್ಲಿ ಷೇರನ್ನು ಖರೀದಿ ಮಾಡಿದರೆ ಒಂದು ತಿಂಗಳಿನಲ್ಲಿ ಲಾಭ ಗಳಿಸಬಹುದು ಎಂಬುದಾಗಿ ಮಾಹಿತಿಯಂತೆ ಆ ಲಿಂಕನ್ನು ಕ್ಲಿಕ್ ಮಾಡಿದಾಗ, SBI Securities Discussion Group ಎಂಬ ವಾಟ್ಸಪ್ ಗ್ರೂಪ್ ಗೆ ವಿಶ್ವನಾಥ ಕುಲಾಲ ಅವರ ಮೊಬೈಲ್‌ ನಂಬರ್ ಸೇರ್ಪಡೆಗೊಂಡಿದೆ.

ತತ್‌ಕ್ಷಣ Mala Todarwal ಎಂಬ ಹೆಸರಿನ ವಾಟ್ಸಪ್ ನಿಂದ SBICAP Securities ಎಂಬ ಹೆಸರಿನ ಆಪ್ಲಿಕೇಶನ್ ರಿಜಿಸ್ಟ್ರೇಶನ್ ಫಾರಂಗೆ ಬ್ಯಾಂಕ್ ಖಾತೆ ಸಹಿತ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿಸಿದರು. ಅನಂತರ ಹ್ಯಾಕರ್‌ ಹೇಳಿದಂತೆ ಮೊದಲು 9,19,000 ರೂ. ಕಳುಹಿಸಿದ್ದು, ಲಾಭಾಂಶವಾಗಿ ಒಟ್ಟು 37,98,895 ರೂ. ದೊರೆಯುತ್ತದೆ ಎಂದು ತಿಳಿಸಿದ್ದರು.

ಬಳಿಕ ಕಮೀಷನ್ 3,92,258 ರೂ. ಖಾತೆಗೆ ಹಾಕಿದರೂ ಹಣ ವಾಪಸ್ ನೀಡದೇ ಇದ್ದಾಗ ಸಂಶಯ ಬಂದು ಮೋಸ ಹೋಗಿರುವುದು ಗೊತ್ತಾಯಿತು. ಒಟ್ಟು 13,11,258 ರೂ. ಕಳೆದುಕೊಂಡಿರುವುದಾಗಿ ವಿಶ್ವನಾಥ ಕುಲಾಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

20/12/2025 10:07 am

Cinque Terre

4.83 K

Cinque Terre

2

ಸಂಬಂಧಿತ ಸುದ್ದಿ