ಥೈಲ್ಯಾಂಡ್‌ನ ತೈಪೆಯಲ್ಲಿ ನಡೆದ ಸ್ಮೋಕ್ ಗ್ರೆನೇಡ್ ದಾಳಿ ಮತ್ತು ಚೂರಿ ಇರಿತದ ಭೀಕರ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ರೈಲ್ವೆ ನಿಲ್ದಾಣದ ಸಮೀಪದ ಪ್ರದೇಶದಲ್ಲಿ ಓರ್ವ ಯುವಕ ಮೊದಲು ಸ್ಮೋಕ್ ಗ್ರೆನೇಡ್ ಎಸೆದು, ನಂತರ ಸಿಕ್ಕ ಸಿಕ್ಕವರಿಗೆ ಚೂರಿಯಿಂದ ಇರಿದಿದ್ದಾನೆ.
ದಾಳಿ ನಡೆಸಿದ ಬಳಿಕ, ಆತ ಶಾಪಿಂಗ್ ಮಾಲ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಳಿ ನಡೆಸಿದ ವ್ಯಕ್ತಿಯನ್ನು 27 ವರ್ಷದ ಝಾಂಗ್ ವೆನ್ ಎಂದು ಗುರುತಿಸಲಾಗಿದೆ. ಆದರೆ, ಈ ಕೃತ್ಯಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ ಗುಂಡಿನ ದಾಳಿ ಘಟನೆಯ ಬೆನ್ನಲ್ಲೇ ಈ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
PublicNext
20/12/2025 01:29 pm
LOADING...