ಮಂಗಳೂರು: ನಗರದ ಹೊರವಲಯದ ಪಚ್ಚನಾಡಿಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ಡಿ.18ರಂದು ತಡರಾತ್ರಿ 1.30ರ ವೇಳೆಗೆ 7 ಮಂದಿ ಪರಾರಿಯಾಗಿದ್ದಾರೆ. ಕೇಂದ್ರದ ವಾಸದ ಕೊಠಡಿ ಸಂಖ್ಯೆ 3ರಲ್ಲಿದ್ದ ಇವರು ಕಿಟಕಿಯ ಕಂಬಿ ಮುರಿದು ಪರಾರಿಯಾಗಿದ್ದಾರೆ ಎಂದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಾರಿಯಾದವರ ವಿವರ
ದೇವರಾಜು (37), 5.2 ಅಡಿ ಎತ್ತರ, ಗುಂಡುಮುಖ, ಗಡ್ಡ ಮೀಸೆ ಇರುವುದಿಲ್ಲ.ಕಪ್ಪು ಮೈಬಣ್ಣ ಬೂದು ಬಣ್ಣದ ಸೈಟರ್‌ಧರಿಸಿದ್ದು, ಕನ್ನಡ ತಿಳಿದಿದೆ. ದುರ್ಗಾ ಬಾಯ್ (56), 5 ಅಡಿ ಎತ್ತರ, ದುಂಡುಮುಖ, ಕಪ್ಪು ಮೈಬಣ್ಣ ಬೂದು ಬಣ್ಣದ ಸೈಟರ್‌ಧರಿಸಿದ್ದು, ಹಿಂದಿ ತಿಳಿದಿದೆ. ಮಹಾಂತೇಶ್ (37), 5.4 ಅಡಿ ಎತ್ತರ, ಉದ್ದ ಮುಖ, ಕಪ್ಪು ಮೈಬಣ್ಣಬೂದು ಬಣ್ಣದಸೈಟರ್‌ಧರಿಸಿದ್ದು, ಕನ್ನಡತಿಳಿದಿದೆ. ಬಿನು ಟಿ.ಜೆ. (42,) 5.6 ಅಡಿ ಎತ್ತರ, ಗುಂಡು ಮುಖ, ಕಪ್ಪು ಮೈಬಣ್ಣ ಕಂದು ಬಣ್ಣದ ಸೈಟರ್‌ಧರಿಸಿದ್ದು,ಮಲಯಾಳ ಭಾಷೆ ತಿಳಿದಿದೆ. ಶರಣಪ್ಪ ಹಾಲಪ್ಪ ಹೊಸಮನಿ (37), 5.6 ಅಡಿ ಎತ್ತರ, ಉದ್ದಮುಖ, ಕಪ್ಪು ಮೈಬಣ್ಣಕಂದು ಬಣ್ಣದ ಸೈಟರ್‌ಧರಿಸಿದ್ದು, ಕನ್ನಡ ಭಾಷೆ ತಿಳಿದಿದೆ. ಹೀರೇಮಲ್ಲೇನಗೇರಿ ಗುರುರಾಜ್ (38), 5.5 ಅಡಿ ಎತ್ತರ, ಗುಂಡುಮುಖ, ಕಪ್ಪು ಮೈಬಣ್ಣ ಕಂದು ಬಣ್ಣದ ಸೈಟರ್‌ಧರಿಸಿದ್ದು, ಕನ್ನಡ ಭಾಷೆ ತಿಳಿದಿದೆ. ಪ್ರಭು (37), 5.7 ಅಡಿ ಎತ್ತರ, ಕೋಲುಮುಖ, ಕಪ್ಪು ಮೈಬಣ್ಣ. ಕಂದು ಬಣ್ಣದ ಸೈಟರ್‌ಧರಿಸಿದ್ದು ಕನ್ನಡ ಭಾಷೆ ತಿಳಿದಿದೆ.
ಈ ಚಹರೆಯ ವ್ಯಕ್ತಿಗಳು ಕಂಡು ಬಂದಲ್ಲಿ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
Kshetra Samachara
20/12/2025 09:35 pm