ಪುತ್ತೂರು:ಕೊಂಬೆಟ್ಟು ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಗೆ ಹೆಲೈಟ್ ಧರಿಸಿದ ವ್ಯಕ್ತಿಗಳಿಬ್ಬರು ನುಗ್ಗಿ ದರೋಡೆಗೆ ಯತ್ನಿಸಿದ ಘಟನೆ ಸಂಭವಿಸಿದೆ.
ಕೊಂಬೆಟ್ಟು ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ ಅವರ ಮನೆಗೆ ಡಿ. 17ರಂದು ನುಗ್ಗಿದ ಹೆಲೈಟ್ ಧರಿಸಿದ ವ್ಯಕ್ತಿಗಳಿಬ್ಬರು ದರೋಡೆಗೆ ವಿಫಲ ಯತ್ನ ನಡೆಸಿದ್ದಾರೆ. ರಾತ್ರಿ 10ರ ವೇಳೆ ಊಟ ಮಾಡಿ ಮನೆಯೊಳಗೆ ನಾರಾಯಣ್ ಅವರ ಪತ್ನಿ ಕೂತಿದ್ದರು. ಈ ವೇಳೆ ಹಿಂಬದಿಯ ಬಾಗಿಲಿನಿಂದ
ಈ ವೇಳೆ ವ್ಯಕ್ತಿಗಳಿಬ್ಬರು ನಾರಾಯಣ್ ಅವರ ಪತ್ನಿಯ ಬಾಯಿ, ಕಣ್ಣನ್ನು ಕೈಯಿಂದ ಹಿಡಿದುಕೊಂಡರು. ಅವರಿಂದ ತಪ್ಪಿಸಲು ಯತ್ನಿಸಿದಾಗ ಕೆಳಗೆ ಬಿದು ಬೊಬ್ಬೆ ಹಾಕಿದರು. ಬೊಬ್ಬೆ ಕೇಳಿ ನಾರಾಯಣ್ ಅಲ್ಲಿಗೆ ಬಂದಿದ್ದು ದರೋಡೆಕೋರರು ಅವರನ್ನೂ ಹಿಡಿದುಕೊಳ್ಳುವ ಪ್ರಯತ್ನ ನಡೆಸಿದರು. ಈ ವೇಳೆ ಅವರನ್ನು ದೂಡಿದ್ದರಿಂದ ಗಾಬರಿಗೊಂಡ ಕಳ್ಳರಿಬ್ಬರು ಮನೆಯ ಹಿಂಬದಿಯ ಬಾಗಿಲ ಮೂಲಕ ಓಡಿಹೋಗಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/12/2025 09:41 pm
LOADING...