ಸುಬ್ರಹ್ಮಣ್ಯ: ಹೊಟೇಲ್ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನೋರ್ವ ಹೊಟೇಲ್‌ನಲ್ಲಿದ್ದ ಲ್ಯಾಪ್ ಟಾಪ್, ಮೊಬೈಲ್ ಕಳ್ಳತನ ಮಾಡಿದ್ದಾನೆ.
ಗುಜರಾತ್ ಮೂಲದ ಅವಿನಾಶ್ ಪಾಂಡ್ ಆರೋಪಿ. ಸುಬ್ರಹ್ಮಣ್ಯದ ಔರಮ್ ಹೊಟೇಲ್‌ನಲ್ಲಿ ಅ.23ರಂದು ಅವಿನಾಶ್ ಪಾಂಡ್ ಎಂಬಾತನು ಕೆಲಸಕ್ಕೆ ಸೇರಿದ್ದು, ಅನಂತರ ನ.7ರಂದು ಯಾರಿಗೂ ಹೇಳದೆ ಆತ ಹೊಟೇಲ್‌ನಿಂದ ಹೋಗಿದ್ದಾನೆ. ಈ ವೇಳೆ ಹೊಟೇಲ್‌ನಲ್ಲಿದ್ದ ಎಚ್.ಪಿ. ಕಂಪೆನಿಯ ಲ್ಯಾಪ್ ಟಾಪ್ ಮತ್ತು ರೆಡ್ಡಿ ಕಂಪೆನಿಯ ಮೊಬೈಲ್ ಫೋನ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ವಿಚಾರಿಸಿದ ಬಳಿಕ ನ.16 ರಂದು ಮೊಬೈಲ್ ಫೋನ್ ನನ್ನು ಕೋರಿಯರ್ ಮುಖಾಂತರ ಕಳುಹಿಸಿದ್ದಾನೆ. ಲ್ಯಾಪ್ ಟಾಪ್ ನ್ನು ಕಳುಹಿಸಿರುವುದಿಲ್ಲ. ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
20/12/2025 09:43 pm
LOADING...