ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ

ಗುಂಡ್ಲುಪೇಟೆ : ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಗುಂಪೊಂದು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಗುಂಡ್ಲುಪೇಟೆ ಪಟ್ಟಣದ ಖುಷಿ ರೆಸಾರ್ಟ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಮಹದೇವಪ್ರಸಾದ್ ನಗರದ ಸಾಬೀರ್ ಪಾಷಾ ( 23) ಇರಿತಕ್ಕೊಳಗಾದ ಯುವಕನಾಗಿದ್ದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆರು ಮಂದಿಯ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಘಟನಾ ವಿವರ : ಪಟ್ಟಣದ ಖುಷಿ ರೆಸಾರ್ಟ್ ಬಳಿ ಇರುವ ಟೀ ಅಂಗಡಿಯಲ್ಲಿ ಸ್ನೇಹಿತರೊಟ್ಟಿಗೆ ನಿಂತಿದ್ದ ವೇಳೆ ಆ ಸಂದರ್ಭದಲ್ಲಿ ಬಾರ್ನಿಂದ ಹೊರಬಂದ ಪಟ್ಟಣ ನಿವಾಸಿ ಆರು ಮಂದಿ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ನಮ್ಮನ್ಯಾಕೆ ಗುರಾಯಿಸುತ್ತೀರಿ ಎಂದು ಜಗಳ ತೆಗೆದು ಕೊಲೆ ಬೆದರಿಕೆ ಹಾಕಿದ್ದಾರೆ. ಆರು ಮಂದಿಯ ಪೈಕಿ ಮಹೇಶ್ ಅಲಿಯಾಸ್ ದೌಡು ನಿಮ್ಮನ್ನ ಕೊಲೆ ಮಾಡುತ್ತೇನೆ ಎಂದು ಜಗಳ ಶುರು ಮಾಡಿದ್ದಾರೆ. ಚಾಕುವಿನಿಂದ ಸಾಬೀರ್ ಪಾಷನ ಕುತ್ತಿಗೆ ಚುಚ್ಚಿ, ಇನ್ನಷ್ಟು ಹಲ್ಲೆಗೆ ಮುಂದಾದ ವೇಳೆ ಸಾಬೀರ್ ಪಾಷನ ತುಟಿ ಮತ್ತು ಬೆನ್ನಿಗೆ ಇರಿಯಲಾಗಿದೆ. ಹಲ್ಲೆ ತಪ್ಪಿಸಲು ಕೂಗಿಕೊಂಡ ವೇಳೆ ಮಹೇಶ ದೌಡು, ಧನು, ಈಶ್ವರ, ಸೇರಿದಂತೆ ಮತ್ತೆ ಮೂರು ಮಂದಿ ಪರಾರಿಯಾಗಿದ್ದಾರೆ ಎಂದು ಪೊಲೀಸರ ಎಫ್ ಐ ಆರ್ ನಲ್ಲಿ ದಾಖಲಾಗಿದೆ. ಧನು ಹಾಗೂ ಈಶ್ವರ್ ಎಂಬುವರನ್ನ ಬಂಧಿಸಲಾಗಿದ್ದು ಉಳಿದವರಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಸ್ನೇಹರಾಜ್, ಪಿಐ ಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ.

Edited By : Manjunath H D
PublicNext

PublicNext

21/01/2026 06:51 pm

Cinque Terre

27.94 K

Cinque Terre

0

ಸಂಬಂಧಿತ ಸುದ್ದಿ