ಕುಮಟಾ: ರಾಜ್ಯಪಾಲರಿಗೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಅಡ್ಡಗಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸಂವಿಧಾನಾತ್ಮಕ ಹುದ್ದೆ ಹೊಂದಿರುವವರು. ಅವರ ಗೌರವಕ್ಕೆ ಧಕ್ಕೆ ತರುವ ರೀತಿಯ ವರ್ತನೆ ಸರಿಯಲ್ಲ ಎಂದು ಹೇಳಿದರು.
ಮೊನ್ನೆ ನಡೆದ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬರದೇ ಇದ್ದಿದ್ದರೆ ದೊಡ್ಡ ಸಮಸ್ಯೆ ಉಂಟಾಗುತ್ತಿತ್ತು. ಆದರೆ ಅವರು ಸುಳ್ಳು ಭಾಷಣ ಓದಲು ನಿರಾಕರಿಸಿದ್ದಾರೆ. ಇದು ಅವರ ಸಂವಿಧಾನಾತ್ಮಕ ಹಕ್ಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಂಸರಾಜ್ ಭಾರಧ್ವಾಜ್ ರಾಜ್ಯಪಾಲರಾಗಿದ್ದ ಸಂದರ್ಭದಲ್ಲೂ ಅವರು ಭಾಷಣ ಓದಿರಲಿಲ್ಲ. ಆದರೂ ಆಗ ನಾವು ರಾಜ್ಯಪಾಲರಿಗೆ ಅಗತ್ಯವಾದ ಗೌರವ ನೀಡಿದ್ದೇವೆ ಎಂದು ಅವರು ಹೇಳಿದರು.
ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಸಭಾ ಸದಸ್ಯರಾಗಿದ್ದ ಅನುಭವ ಹೊಂದಿದವರು. ಇಂತಹ ಅನುಭವ ಹೊಂದಿರುವವರು ಈ ರೀತಿಯ ವರ್ತನೆ ತೋರಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರನ್ನು ಸದನದಲ್ಲಿ ಅಡ್ಡಗಟ್ಟುವುದು ಯಾವತ್ತೂ ಸದಸ್ಯರ ಗೌರವವನ್ನು ಹೆಚ್ಚಿಸುವ ಕೆಲಸವಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟವಾಗಿ ಹೇಳಿದರು.
PublicNext
24/01/2026 03:36 pm
LOADING...