ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮಖಂಡಿ: ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​​​ನಿಂದ ಮನೆಗೆ ಬೆಂಕಿ; ಸ್ಥಳಕ್ಕೆ ಶಾಸಕ ಜಗದೀಶ ಗುಡಗುಂಟಿ ಭೇಟಿ

ಜಮಖಂಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಮನೆಗೆ ಬೆಂಕಿ ತಗುಲಿದ ಘಟನೆ ಜಮಖಂಡಿ ತಾಲೂಕಿನ ಕುರಗೋಡ ಗ್ರಾಮದಲ್ಲಿ ನಡೆದಿದೆ. ಸಿದ್ದರಾಯ ಮಾಳಿ ಎಂಬುವವರ ಮನೆ ಹಾನಿಗೊಳಗಾಗಿದೆ.

* ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ, ಅಪಾರ ಹಾನಿ

* ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಸಾಮಗ್ರಿ ಸುಟ್ಟು ಭಸ್ಮ

* ಪ್ರಾಣಾಪಾಯದಿಂದ ಪಾರಾದ ಸಿದ್ದರಾಯ ಮಾಳಿ ಕುಟುಂಬಸ್ಥರು

ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಶಾಸಕ ಜಗದೀಶ ಗುಡಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ವಲ್ಪ ಮಟ್ಟಿಗೆ ಹಣ ನೀಡಿ ಜೊತೆಗೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸುಜಿತಗೌಡ ಪಾಟೀಲ, ಗಾಮೇಶ ಬಾಪಕರ, ಬಸವರಾಜ ಪರಮಗೊಂಡ, ರಾಜು ಕರಾಬೆ, ಸುರೇಶ ಮಾಳಿ ಇನ್ನೂ ಅನೇಕರು ಇದ್ದರು.

ವರದಿ: ವಿನೋದ ಸೂರಗೊಂಡ, ಪಬ್ಲಿಕ್ ನೆಕ್ಸ್ಟ್ ಜಮಖಂಡಿ

Edited By : Manjunath H D
PublicNext

PublicNext

25/01/2026 10:56 am

Cinque Terre

14.6 K

Cinque Terre

0

ಸಂಬಂಧಿತ ಸುದ್ದಿ