ಬಾಗಲಕೋಟೆ : ರೋಡ್ ಹಂಪ್ಸ್ ಹಾರಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್, ಎಗ್ ರೈಸ್ ಅಂಗಡಿಗೆ ನುಗ್ಗಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಟ್ರ್ಯಾಕ್ಟರ್ ಗುದ್ದಿದ ರಭಸಕ್ಕೆ ಎಗ್ ರೈಸ್ ಅಂಗಡಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ. ಅಂಗಡಿಗೆ ನುಗ್ಗಿದ ಬಳಿಕ, ಎರ್ಟಿಗಾ ಕಾರಿಗೆ ಹಿಂಬದಿ ಡಿಕ್ಕಿಯಾಗಿದ್ದು, ಕಾರು ಹಿಂಬದಿ ಜಖಂ ಆಗಿದೆ. ಮುಧೋಳ ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಘಟನೆ ನಡೆದಿದ್ದು, ಚಾಲಕನ ಅಜಾಗೃತ ಚಾಲನೆ ಕಾರಣ ಎಂಬ ಮಾಹಿತಿ ಸಿಕ್ಕಿದೆ. ವಜ್ಜರಮಟ್ಟಿ ಗ್ರಾಮದಿಂದ ಕಬ್ಬಿನ ಲೋಡ್ ಹೊತ್ತು ಹೊರಟಿದ್ದ ಟ್ರ್ಯಾಕ್ಟರ್ ಅವಘಡದಿಂದ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಮುಧೋಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
27/01/2026 10:03 pm
LOADING...