ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಭಕ್ತನ ಸಂಕಲ್ಪ ಕ್ಷಣದಲ್ಲಿ ದೇವರ ಬಲಭಾಗದಲ್ಲಿ ಹೂ ಬೀಳುವ ದೃಶ್ಯ ಸೆರೆ

ಚಳ್ಳಕೆರೆ: ಭಕ್ತನೊಬ್ಬ ಮನಸ್ಸಿನಲ್ಲಿ ಕೋರಿಕೊಂಡ ಕಾರ್ಯ ಈಡೇರಲಿ ಎಂಬ ಸಂಕಲ್ಪ ಮಾಡಿಕೊಂಡ ಕ್ಷಣದಲ್ಲೇ ದೇವರ ಬಲಭಾಗದಿಂದ ಹೂವೊಂದು ಬೀಳುತ್ತಿರುವ ಅಪರೂಪದ ದೃಶ್ಯ ಮಾಧ್ಯಮದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿ ಶ್ರೀಸೂರ್ಯ ನಾರಾಯಣ ಸ್ವಾಮಿ ಪ್ರತಿಷ್ಠಾಪನೆಯನ್ನು ರಥಸಪ್ತಮಿ ದಿನವಾದ ಭಾನುವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಭಾಗ್ಯ ಸೂಕ್ತದೊಂದಿಗೆ ಶ್ರೀ ಸೂರ್ಯನಾರಾಯಣ ಸ್ವಾಮಿಯ ಪ್ರತಿಷ್ಠಾಪನೆ ನಡೆಯಿತು.

ಗಂಗಾಪೂಜೆ, ಗೋಪೂಜೆ, ಅಷ್ಟಬಂಧ ಪ್ರತಿಷ್ಠಾಪನೆ, ನೇತ್ರೋಲನ, ಪ್ರಾಣಪ್ರತಿಷ್ಠೆ, ಜೀವಕಲಾ ಹೋಮ, ಕಲಾಧಿದೇವತಾ ಹೋಮ ಸೇರಿದಂತೆ ವಿವಿಧ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಸೂರ್ಯ ದೇವರನ್ನು ಪ್ರತಿಷ್ಠಾಪಿಸಿ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪೂಜೆಯ ಮಧ್ಯೆ ಭಕ್ತನೊಬ್ಬ ತನ್ನ ಇಷ್ಟಾರ್ಥ ಈಡೇರಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲೇ, ದೇವರ ಬಲ ಭಾಗದಿಂದ ಹೂವು ನೀಡುವ ದೃಶ್ಯವನ್ನು ಅಲ್ಲಿ ಹಾಜರಿದ್ದ ಮಾಧ್ಯಮದ ಕ್ಯಾಮೆರಾ ಸ್ಪಷ್ಟವಾಗಿ ದಾಖಲಿಸಿದೆ.

ಘಟನೆಯನ್ನು ಕಂಡ ಭಕ್ತರು ಇದನ್ನು ದೈವಿಕ ಸೂಚನೆ ಎಂದು ಭಾವಿಸಿದ್ದು, ದೇವರ ಕೃಪೆಯ ಸಂಕೇತವೆಂದು ಅಭಿಪ್ರಾಯಪಟ್ಟರು. ಹೆಚ್ಚಿನ ಭಕ್ತರು ಭಕ್ತಿ ಭಾವದಿಂದ ದೇವರ ನಾಮಸ್ಮರಣೆ ಮಾಡಿದರು.

ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

Edited By : Vinayak Patil
Kshetra Samachara

Kshetra Samachara

26/01/2026 08:34 am

Cinque Terre

5.74 K

Cinque Terre

0

ಸಂಬಂಧಿತ ಸುದ್ದಿ