ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡುಗೆಮನೆಗೆ ಸಿಹಿ ಸುದ್ದಿ: ಯುರೋಪ್ ಒಪ್ಪಂದದಿಂದ ನೂರಾರು ರೂಪಾಯಿ ಉಳಿತಾಯ

ಬೆಂಗಳೂರು: ಇವತ್ತು ಅಡುಗೆಮನೆಗೆ ನಿಜಕ್ಕೂ ಸಿಹಿ ಸುದ್ದಿ ಸಿಕ್ಕಿದೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ (FTA) ಅಂತಿಮಗೊಂಡಿದೆ. ಇದರ ನೇರ ಲಾಭ ಆಗೋದು ಅಡುಗೆ ಎಣ್ಣೆ ಬಳಕೆದಾರರಿಗೆ, ವಿಶೇಷವಾಗಿ ಆಲಿವ್ ಆಯಿಲ್ ಮತ್ತು ಮಾರ್ಗರೀನ್ ಉಪಯೋಗಿಸುವವರಿಗೆ. ಇಲ್ಲಿಯವರೆಗೂ ಈ ಉತ್ಪನ್ನಗಳ ಮೇಲೆ ಇದ್ದ ಶೇ.40–45ರಷ್ಟು ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಸುಂಕ ರದ್ದಾದ ತಕ್ಷಣ ಬೆಲೆ ಅರ್ಧಕ್ಕೆ ಇಳಿಯುತ್ತೆ ಅನ್ನೋದು ತಪ್ಪು. ಯಾಕಂದ್ರೆ ರಾಜ್ಯ ತೆರಿಗೆ, ಜಿಎಸ್‌ಟಿ ಮತ್ತು ಸಾರಿಗೆ ವೆಚ್ಚಗಳು ಇದ್ದೇ ಇರುತ್ತವೆ. ಆದರೆ ಅಂದಾಜು ಪ್ರಕಾರ ಈಗಿರುವ ಬೆಲೆಯಲ್ಲಿ ಶೇ.20ರಿಂದ 35ರಷ್ಟು ಕಡಿತ ಆಗೋದು ಪಕ್ಕಾ. ಅಂದರೆ ₹1,000 ಬೆಲೆಯ ಎಣ್ಣೆಗೆ ಕನಿಷ್ಠ ₹200–300 ಉಳಿತಾಯ ಸಾಧ್ಯ.

ಯುರೋಪ್ ಅಂದ್ರೆ ಆಲಿವ್ ಆಯಿಲ್ ಕಣಜ. ಸ್ಪೇನ್ ಮತ್ತು ಇಟಲಿಯಿಂದ ಬರೋ ಬೆರ್ಟೊಲ್ಲಿ, ಬೋರ್ಗೆಸ್, ಫಿಗರೊ ಬ್ರ್ಯಾಂಡ್‌ಗಳ ದರ ಇಳಿಯಲಿದೆ. ಈಗ ₹900–1,200 ಇದ್ದ ಒಂದು ಲೀಟರ್ ಆಲಿವ್ ಆಯಿಲ್ ಇನ್ಮುಂದೆ ₹650–900ರೊಳಗೆ ಸಿಗುವ ಸಾಧ್ಯತೆ ಇದೆ.

ಇದರಿಂದ ಹೆಲ್ತ್ ಕಾನ್ಶಿಯಸ್ ಗ್ರಾಹಕರಿಗೆ ಲಾಭವಾಗುವುದರ ಜೊತೆಗೆ, ದೇಶೀಯ ಎಣ್ಣೆ ಬ್ರ್ಯಾಂಡ್‌ಗಳ ಮೇಲೂ ಬೆಲೆ ಸ್ಪರ್ಧೆ ಹೆಚ್ಚಾಗಲಿದೆ. ಒಟ್ಟಿನಲ್ಲಿ ಯುರೋಪ್ ಜೊತೆಗಿನ ಈ ಒಪ್ಪಂದದಿಂದ ಮಧ್ಯಮ ವರ್ಗದ ಅಡುಗೆಮನೆ ಬಜೆಟ್‌ಗೆ ದೊಡ್ಡ ರಿಲೀಫ್ ಸಿಕ್ಕಿದೆ.

Edited By :
PublicNext

PublicNext

28/01/2026 08:56 am

Cinque Terre

23.46 K

Cinque Terre

0

ಸಂಬಂಧಿತ ಸುದ್ದಿ