ಬೆಳಗಾವಿ: ಒಂದು ವರ್ಷದಲ್ಲಿ 10 ಜನರ ಪ್ರಾಣ ಪಡೆದ ಬೀದಿನಾಯಿಗಳ ಅಟ್ಟಹಾಸ ಮುಂದುವರೆದಿದೆ. ಒಂದೇ ದಿನದಲ್ಲಿ ಏಳು ಜನರಿಗೆ ಒಂದೇ ಬೀದಿನಾಯಿ ಕಚ್ಚಿದೆ!
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಎಂಜಿ ಹೌಸಿಂಗ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಿರಾಣಿ ಅಂಗಡಿಗೆ ಹೋಗಿ ಬರುತ್ತಿದ್ದ ಬಾಲಕಿ ಮೇಲೆ ಬೀದಿನಾಯಿ ದಾಳಿ ಮಾಡಿದೆ.
ಎಂಜಿ ಹೌಸಿಂಗ್ ಕಾಲೋನಿಯ ಅಕ್ಕಪಕ್ಕದ ಓಣಿಯಲ್ಲಿ ಮಕ್ಕಳು ಸೇರಿದಂತೆ ಏಳು ಜನರ ಮೇಲೆ ಬೀದಿನಾಯಿ ದಾಳಿ ಮಾಡಿದೆ. ದಾಳಿಯಿಂದ ತಲೆ, ಕೈ, ಕಾಲು, ಸೇರಿ ವಿವಿಧ ಭಾಗಗಳಿಗೆ ನಾಯಿ ಕಚ್ಚಿದೆ. ನಾಯಿ ಕಚ್ಚಿದ ಹಿನ್ನಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಬೈಲಹೊಂಗಲ ಪಟ್ಟಣದ ಕೆ.ಸಿ. ನಗರ, ಇಂದಿರಾ ನಗರ ಸೇರಿ ವಿವಿಧ ಗಲ್ಲಿಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿನಾಯಿಗಳಿಗೆ ಕಡಿವಾಣ ಹಾಕದ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
Kshetra Samachara
28/01/2026 07:25 pm
LOADING...