ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಣದ ಬರ್ತ್‌ಡೇಗೆ 300 ಜನಕ್ಕೆ ಊಟ, 10 ಕೇಜಿ ಕೇಕ್ ಚಿಕ್ಕಲವಾಳ ಗ್ರಾಮದಲ್ಲಿ ಅಪರೂಪದ ಆಚರಣೆ

ಚಿಕ್ಕೋಡಿ: ಮನೆ ಮಗನಂತೆ ಬೆಳೆಸಿದ ಕೋಣದ ಒಂದು ವರ್ಷದ ಜನ್ಮದಿನ ಆಚರಿಸುವ ಮೂಲಕ ಚಿಕ್ಕಲವಾಳ ಗ್ರಾಮದ ಯುವಕ ಮಾದರಿಯಾಗಿದ್ದಾನೆ.

ಗ್ರಾಮದ ಕೂಲಿಕಾರ ಸಂಜಯ ರಾಮಚಂದ್ರ ಸಠಾಲೆ (30) ಮನೆಯಲ್ಲಿ ಐದು ಎಮ್ಮೆಗಳನ್ನು ಸಾಕಿದ್ದಾರೆ. ಕಬ್ಬು ಕಟಾವು ಹಂಗಾಮಿನಲ್ಲಿ ಕೂಲಿ ಕಾರ್ಮಿಕನಾಗಿ ಕಾರ್ಯ ಮಾಡುವ ಇವರಿಗೆ ಇರುವುದು ಕೇವಲ 10 ಗುಂಟೆ ಜಮೀನು ಮಾತ್ರ. ಬೇರೆಯವರ ಜಮೀನಿನಿಂದ ಎಮ್ಮೆಗಳಿಗೆ ಮೇವು ತಂದು ಸಲಹುತ್ತಾರೆ.

ಗುಜರಾತಿನ ಮುರ್ರಾ ಜಾತಿ ಎಮ್ಮೆಗಳನ್ನು ಸಾಕಿರುವ ಇವರು ಒಂದು ಎಮ್ಮೆಗೆ ಜಾಫರಾ ಕೋಣನಿಂದ ಗರ್ಭಧಾರಣೆ ಮಾಡಿಸಿದ್ದಾರೆ. ಮುರ್ರಾ ತಳಿ ಎಮ್ಮೆ ಜಾಫರಾ ತಳಿ ಕೋಣಕ್ಕೆ ಜನ್ಮ ನೀಡಿದೆ. ಕೋಣವನ್ನು ಒಂದು ಲಕ್ಷ ರೂಪಾಯಿಗೆ ನೀಡುವಂತೆ ವ್ಯಾಪಾರಸ್ಥರು ಕೇಳಿದ್ದರು. ಆದರೆ ಅವಿವಾಹಿತ ಸಂಜಯ್ ಮಾರಾಟ ಮಾಡಲು ಒಪ್ಪಿಲ್ಲ. ಈ ಕೋಣಕ್ಕೆ ಮಗನ ಪ್ರೀತಿ ತೋರಿಸಿ ಮಮಕಾರದಿಂದ ಅದನ್ನು ಸಲಹುತ್ತಿದ್ದಾರೆ. 'ನಾನು ಈ ಕೋಣವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ನನ್ನ ಜೀವ ಇರುವವರೆಗೆ ಇದನ್ನು ಮಗನಂತೆ ಸಲಹುತ್ತೇನೆ' ಎಂದು ಹೇಳುತ್ತಾರೆ.

ಕೋಣದ ಜನ್ಮ ದಿನಾಚರಣೆಯನ್ನು ಗಡಿ ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. 10 ಕೆಜಿಯ ಕೇಕ್ ಕಟ್ ಮಾಡಿ ಊರಿನ ಜನರೊಂದಿಗೆ ಸಂಭ್ರಮಿಸಿದ್ದಾರೆ. ಅಲ್ಲದೆ 300 ಜನರಿಗೆ ಊಟ ಹಾಕಿಸಿ ಅದರ ಜನ್ಮದಿನಾಚರಣೆಯನ್ನು ಸಡಗರದಿಂದ ಆಚರಿಸಿದ್ದಾರೆ. ಕೋಣದ ಜನ್ಮದಿನಾಚರಣೆ ನಿಮಿತ್ತವಾಗಿ ಗ್ರಾಮದಲ್ಲಿ ಭಜನೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು.

Edited By : Manjunath H D
PublicNext

PublicNext

02/02/2026 02:53 pm

Cinque Terre

18.81 K

Cinque Terre

1

ಸಂಬಂಧಿತ ಸುದ್ದಿ