ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ನೀರು ಪೂರೈಸುವ ಜಾಕವೆಲ್ ಬಳಿ ಮೊಸಳೆಗಳು ಪ್ರತ್ಯಕ್ಷ

ಬೈಲಹೊಂಗಲ: ತಾಲೂಕಿನ ಮಾಟೋಳ್ಳಿ ಗ್ರಾಮದ ಸನಿಹದಲ್ಲಿರುವ, ನೀರು ಪೂರೈಸುವ ಜಾಕವೆಲ್ ಪ್ರದೇಶದಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದು, ಸ್ಥಳೀಯ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸೋಮವಾರ ಜಾಕವೆಲ್ ಹತ್ತಿರ ಬೃಹದಾಕಾರದ ಮೊಸಳೆಗಳು ನಡುಗಡ್ಡೆಯ ಮೇಲೆ ಬಂದು ಬಿಸಿಲಿಗೆ ಮೈಯೊಡ್ಡುತ್ತಿದ್ದು, ನಂತರ ನೀರಿಗೆ ಇಳಿಯುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರದೇಶದಲ್ಲಿ ಸುಮಾರು 8 ರಿಂದ 10 ಮೊಸಳೆಗಳಿರಬಹುದು ಎಂದು ಹೇಳಲಾಗುತ್ತಿದೆ.

ಜಾಕವೆಲ್ ಸುತ್ತಮುತ್ತ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು, ನೀರು ತರಲು ಹಾಗೂ ಕೆಲಸಗಳಿಗೆ ರೈತರು ಆಗಾಗ್ಗೆ ತೆರಳುವ ಕಾರಣ ಅಪಾಯದ ಭೀತಿ ಹೆಚ್ಚಾಗಿದೆ. ಆದ್ದರಿಂದ ಯಾವುದೇ ಅನಾಹುತ ಸಂಭವಿಸುವ ಮೊದಲು ಅರಣ್ಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಮೊಸಳೆಗಳನ್ನು ಹಿಡಿದು ಸುರಕ್ಷಿತವಾಗಿ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

03/02/2026 12:00 pm

Cinque Terre

8.17 K

Cinque Terre

0

ಸಂಬಂಧಿತ ಸುದ್ದಿ