ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಜಮೀನಿನಲ್ಲಿ ಚಿರತೆ ಬಿಂದಾಸ್ ಓಡಾಟ; ಮೊಬೈಲ್ ನಲ್ಲಿ ದೃಶ್ಯ ಸೆರೆ

ಮೈಸೂರು: ಮೈಸೂರು ತಾಲ್ಲೂಕು ಕಣಿಯನಹುಂಡಿ ಗ್ರಾಮದಲ್ಲಿ ಚಿರತೆ ಬಿಂದಾಸ್ ಆಗಿ ಓಡಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಮುಖ್ಯ ರಸ್ತೆಯಲ್ಲಿ ಲಾರಿಯಲ್ಲಿ ತೆರಳುತ್ತಿದ್ದ ವೇಳೆ ವಾಹನದ ಮುಂದೆ ಸಾಗಿ ಜಮೀನಿಗೆ ಪ್ರವೇಶಿಸಿದ ಚಿರತೆಯ ಚಲನವಲನವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಜಮೀನಿನಲ್ಲಿ ಮುಂದೆ ಸಾಗಿ ವಿರಮಿಸಿಕೊಳ್ಳುವ ದೃಶ್ಯ ಸೆರೆಯಾಗಿದೆ. ಈ ಭಾಗದಲ್ಲಿ ರಾತ್ರಿ ವೇಳೆ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಸೂಕ್ತವಾಗಿ ಸ್ಪಂದಿಸಿಲ್ಲವೆಂದು ಆರೋಪಗಳಿವೆ.

ರಾತ್ರಿ ವೇಳೆ ಗ್ರಾಮದ ಜನತೆ ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲವೆಂದು ಆರೋಪಿಸಿದ್ದಾರೆ.

Edited By : Vinayak Patil
PublicNext

PublicNext

29/01/2026 07:19 am

Cinque Terre

13.63 K

Cinque Terre

0

ಸಂಬಂಧಿತ ಸುದ್ದಿ