ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ : ತ್ಯಾಗ ಮತ್ತು ಸಂಸ್ಕೃತಿ‌ ಹಿಂದೂ‌ ಸನಾತನ ಧರ್ಮದ ಮೂಲ‌ - ಸತೀಶ ರಾಮಾ ಶೆಟ್ಟಿ

ಶಿರಸಿ : ಮಗರದ ಮರಾಠಿಕೊಪ್ಪದಲ್ಲಿರುವ ಸಹಾಯ ಟ್ರಸ್ಟ್ ಹಾಗೂ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ವತಿಯಿಂದ ಹಿಂದೂ ಸಮ್ಮೇಳನದ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಮರಾಠಿಕೊಪ್ಪದ ಈಶ್ವರ ದೇವಸ್ಥಾನದಿಂದ ಆರಂಭವಾದ ಈ ಶೋಭಾಯಾತ್ರೆಯು ಅತ್ಯಂತ ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ನೆರವೇರಿತು.

ಧರ್ಮ ಮತ್ತು ಮಾತೃಭೂಮಿಯ ಮಹತ್ವ

ಮರಾಠಿಕೊಪ್ಪದ ಅಂಜನಾದ್ರಿ ಮಾರುತಿ ದೇವಸ್ಥಾನದಲ್ಲಿ ಜರುಗಿದ ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರು, ಹಿಂದೂ ಧರ್ಮ, ಮಾತೃಭೂಮಿಗಾಗಿ ಮಾಡಿದ ತ್ಯಾಗ, ಸಂಸ್ಕೃತಿ ಹಾಗೂ ಇತಿಹಾಸವೇ ಸನಾತನ ಹಿಂದೂ ಧರ್ಮದ ಮೂಲ ಎಂದು ಅಭಿಪ್ರಾಯಪಟ್ಟರು.

ಸಮಾಜ ಸೇವಕ ಸತೀಶ್ ರಾಮಾ ಶೆಟ್ಟಿ ಅವರಿಗೆ ಸನ್ಮಾನ

ಸಹಾಯ ಟ್ರಸ್ಟ್ (ರಿ) ಮರಾಠಿಕೊಪ್ಪ, ಶಿರಸಿ ಇದರ ಅಧ್ಯಕ್ಷರಾದ ಶ್ರೀ ಸತೀಶ್ ರಾಮಾ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. **ಅವರು ೧೯೮೬ರಿಂದ ಸುಮಾರು ೪೦ ವರ್ಷಗಳ ಕಾಲ ಅನಾಥರು, ನಿರ್ಗತಿಕರು, ಬಡವರು ಹಾಗೂ ಮಕ್ಕಳಿಗೆ ಪಾಲನೆ-ಪೋಷಣೆ ನೀಡಿ ನಿಸ್ವಾರ್ಥ ಸಮಾಜ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಈ ಗೌರವ ನೀಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶಿರಸಿಯ ರುದ್ರದೇವರ ಮಠದ ಶ್ರೀ ನಿರಂಜನ ಪ್ರಣವ ಸ್ವರೂಪಿ ಮಲ್ಲಿಕಾರ್ಜುನ ಸ್ವಾಮಿಗಳು, ಎಂ.ಇ.ಎಸ್. ಆರ್.ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು, ಶ್ರೀಮತಿ ವಿನೋದಾ ವಿನಾಯಕ್ ಶೇಟ್ ಹಾಗೂ ಅಂಜನಾದ್ರಿ ಮಾರುತಿ ದೇವಸ್ಥಾನದ ಗೌರವ ಅಧ್ಯಕ್ಷರು, ಅಧ್ಯಕ್ಷರು, ಆಡಳಿತ ಮಹಿಳಾ ಮಂಡಳಿ ಸದಸ್ಯರು ಸತೀಶ್ ರಾಮಾ ಶೆಟ್ಟಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Edited By : PublicNext Desk
PublicNext

PublicNext

29/01/2026 05:47 pm

Cinque Terre

3.37 K

Cinque Terre

0

ಸಂಬಂಧಿತ ಸುದ್ದಿ