ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಮಕ್ಕಳಿಗೆ ಸೂಜಿ ಚುಚ್ಚುವ ವಿಶೇಷ ಜಾತ್ರೆ

ಕಾರವಾರ: ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ - ಗೋವಾ ಗಡಿ ಭಾಗದ ಮಾಜಾಳಿ ಎನ್ನುವ ಗ್ರಾಮದಲ್ಲಿ ನಡೆದ ದಾಡ ದೇವರು ಮತ್ತು ದೇವತಿ ದೇವರ ಮಾರ್ಕೆ ಪುನವ್ ಜಾತ್ರೆ. ಇಲ್ಲಿ ಮದುವೆ ಮುಂಚಿತವಾಗಿ ದೇವರ ಕುಲದ ಪುರುಷರಿಗೆ ಹೊಟ್ಟೆಗೆ ಸೂಜಿ ದಾರ ಪೋಣಿಸುತ್ತಾರೆ. ಮದುವೆಯಾದ ಮುತ್ತೈದೆಯರು ತಮ್ಮ ಕುಲ ದೇವರಿಗೆ ದೀವಜ್ ದೀಪ ಎಂದು ಹರಕೆ ಕೊಡುತ್ತಾರೆ. ಈ‌ ಜಾತ್ರೆಯನ್ನ ಕೊಂಕಣಿ ಗ್ರಾಮ್ಯ ಭಾಷೆಯಲ್ಲಿ ಮಾರ್ಕೆ ಪುನವ್ ಎಂದು ಕರೆಯುತ್ತಾರೆ. ಭರತ ಹುಣ್ಣಿಮೆಯಂದು ಈ‌ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ.

ಇನ್ನೂ ಜಾತ್ರೆಯ ನಿಮಿತ್ತ ಎರಡು ದೇವರ ಬಂಡಿಯನ್ನ ಕನಕಾಂಬರ ಹೂವಿನಿಂದ ಅಲಂಕಾರ ಮಾಡಲಾಗಿತ್ತು, ಬಂಡಿ ಎಳೆಯುವ ಸಂದರ್ಭದಲ್ಲಿ ಯೊ ಬಂಡಿ ಯೊ ಎಂದು ಎಳೆಯಲಾಗುತ್ತದೆ.‌ ಕಾರವಾರ ಭಾಗದಲ್ಲಿ ಗೋವಾ ರಾಜ್ಯದ ಪ್ರಭಾವ ಇದ್ದರು ಕೂಡಾ ಇನ್ನೂ ಕೂಡಾ ಚಾಚುತಪ್ಪದೆ ಹಳೆ ಸಂಪ್ರದಾಯ ಆಚರಣೆ ಮಾಡಲಾಗುತ್ತದೆ ಎನ್ನೋದಕ್ಕೆ ಇಂತ ಜಾತ್ರೆಗಳು ಸಾಕ್ಷ್ಯವಾಗಿದೆ.‌ ಇಲ್ಲಿ ಮುತೈದೆ ಮಹಿಳೆಯರು ತಲೆಯ ಮೇಲೆ ದೀಪವನ್ನ ಇಟ್ಟು ಸಾಗುತ್ತಾರೆ. ಹಲವು ಹರಕೆಯನ್ನು ದೇವರಿಗೆ ನೀಡಲಾಗುತ್ತದೆ, ಇಲ್ಲಿ ಗೋವಾ ಮಹಾರಾಷ್ಟ್ರ, ಸೇರಿ ಬೇರೆ ಬೇರೆ ಕಡೆ ಇದ್ದ ದೇವರ ಕುಲಭಕ್ತರು ಇವತ್ತು ಜಾತ್ರೆಗೆ ಬಂದು ಕೃತಾರ್ಥರಾಗಿ ಯೊ ಬಂಡಿ ಯೋ ಎಂದು ಬಂಡಿ ಎಳೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

ಒಟ್ಟಾರೆ ಕಾರವಾರದ ಮಾಜಾಳಿ ಮಾರ್ಕೆ ಪುನವ್ ಜಾತ್ರೆ ಅದ್ಧೂರಿಯಾಗಿ ನಡೆಯಿತು. ವಿಶಿಷ್ಟ ಸಂಪ್ರದಾಯಗಳು ಚಾಚು ತಪ್ಪದೆ ನಡೆದವು.

ಪ್ರವೀಣ್ ಹೊಸಂತೆ ಪಬ್ಲಿಕ್ ನೆಕ್ಸ್ಟ್ ಕಾರವಾರ.

Edited By : Vinayak Patil
PublicNext

PublicNext

02/02/2026 09:33 pm

Cinque Terre

21.64 K

Cinque Terre

0

ಸಂಬಂಧಿತ ಸುದ್ದಿ