ಚಿತ್ರದುರ್ಗ: ಹೀಗೆ ಊರಿನ ಮಹಾದ್ವಾರಕ್ಕೆ ಮುಳ್ಳಿನ ಬೇಲಿ ಹಾಕಿರೋ ಗ್ರಾಮಸ್ಥರು. ಮನೆಗಳಿಗೆ ಬೀಗ ಜಡಿದು ಊರನ್ನೇ ಬಿಟ್ಟು ಹೊರಟಿರೋ ಜನ್ರು. ಗುಡಿಯಲ್ಲಿ ದೇವರುಗಳನ್ನ ಅಡವಿಯಲ್ಲಿಟ್ಟು ಪೂಜಿಸುತ್ತಿರೋ ಭಕ್ತರು. ಈ ಅಪರೂಪದ ವಿಶಿಷ್ಠ ಆಚರಣೆಗೆ ಸಾಕ್ಷಿಯಾಗಿದ್ದು ಜಾನುಕೊಂಡ ಗ್ರಾಮ. ಹೌದು ಚಿತ್ರದುರ್ಗ ಸಮೀಪದಲ್ಲೇ ಇರೋ ಈ ಊರಲ್ಲಿ ಪ್ರತಿ ವರ್ಷದ ಪುಷ್ಯ ಮಾಸದಲ್ಲಿ ಹೊರ ಬೀಡು ಆಚರಣೆ ಮಾಡೋ ಪರಿ ಇದು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡಾ ಇಲ್ಲಿನ ಜನರು ಹೊರಬೀಡು ಅನ್ನೋ ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಿದ್ದಾರೆ. ಇಡೀ ಊರಿನ ಜನ್ರು, ಮನೆಗಳಿಗೆ ಬೀಗ ಜಡಿದು , ಊರು ಬಿಟ್ಟು ಕಾಡಿನತ್ತ ಹೊರಟಿದ್ದಾರೆ. ಅಲ್ಲದೇ ದನಕರುಗಳ ಜೊತೆ ದೇವರನ್ನೂ ಕೂಡಾ ಕರೆದೊಯ್ದು ವಿಶಿಷ್ಠ ಆಚರಣೆ ಮಾಡಿದ್ದಾರೆ. ಅಲ್ಲದೇ ಊರಿಗೆ ಯಾರೂ ಪ್ರವೇಶ ಮಾಡದಂತೆ ಮುಳ್ಳಿನ ಬೇಲಿ ಹಾಕಿ ನಿರ್ಬಂಧಿಸಿದ್ದಾರೆ.
ಇನ್ನೂ ಹೆರಿಗೆಯಾದ ಬಾಣಂತಿಯರು, ಪುಟಾಣಿ ಮಕ್ಕಳನ್ನೂ ಕೂಡಾ ಮನೆಯಲ್ಲಿ ಬಿಡದೇ ಹೊರ ಬೀಡು ಕರೆದೊಯ್ತಾರೆ. ಅಲ್ಲದೇ ಗ್ರಾಮದ ಹತ್ತಕ್ಕೂ ಹೆಚ್ಚು ದೇವರುಗಳನ್ನ ಕೂರಿಸಿ, ಸಾಮೂಹಿಕವಾಗಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಗ್ರಾಮದ ಹೊರ ಭಾಗದ ತೋಟಗಳಲ್ಲಿ ಕುಟುಂಬ ಸಮೇತ ಬೀಡು ಬಿಟ್ಟಿದ್ದು, ರುಚಿ ರುಚಿ ಅಡುಗೆ ಮಾಡಿಕೊಂಡು ಸವಿದಿದ್ದಾರೆ. ಅಲ್ಲದೇ ಗ್ರಾಮಕ್ಕೆ ರಾಕ್ಷಸರು ಎಂಟ್ರಿ ಆಗ್ತಿದ್ದು, ಅದರಿಂದ ರಾಕ್ಷಸರಿಗೆ ಊರು ಬಿಟ್ಟುಕೊಟ್ಟು ಒಂದು ಊರು ತೊರೆದು ಹೊರ ಬೀಡು ಆಚರಣೆ ಮಾಡ್ತೇವೆ ಅಂತಾರೇ ಇಲ್ಲಿನ ಸ್ಥಳೀಯರು.
ಒಟ್ಟಾರೆ ಗ್ರಾಮಕ್ಕೆ ರಾಕ್ಷಸರು ಎಂಟ್ರಿ ಕೊಡ್ತಾರೆ ಅನ್ನೋ ನಂಬಿಕೆ ಇಲ್ಲಿನ ಜನ್ರದ್ದು. ಇದರಿಂದ ಹೊರಬೀಡು ಆಚರಣೆ ಹೆಸರಲ್ಲಿ ರಾಕ್ಷಸರಿಗಾಗಿ, ಗ್ರಾಮಕ್ಕೆ ಗ್ರಾಮವೇ ಬೀಗ ಜಡಿದುಕೊಂಡು ಕಾಡಿನತ್ತ ಮುಖ ಮಾಡಿದ್ದು ಮಾತ್ರ ವಿಶಿಷ್ಟ ಆಚರಣೆ ಸರಿ.
Kshetra Samachara
30/01/2026 04:27 pm
LOADING...