ಸಾಗರ: ಶಿವಮೊಗ್ಗ ಜಿಲ್ಲೆಯ ಪ್ರಮುಖ ಉತ್ಸವಗಳಲ್ಲಿ ಒಂದಾದ ಸಾಗರ ಮಾರಿಕಾಂಬಾ ಜಾತ್ರೆಯ ರಥೋತ್ಸವಕ್ಕೆ ಸಿದ್ಧತೆಗಳು ಅಂತಿಮಗೊಂಡಿದ್ದು, ಶುಕ್ರವಾರ ರಥವನ್ನು ಸಿದ್ಧಪಡಿಸಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ರಥವನ್ನು ಮಾರಿಕಾಂಬಾ ದೇವಸ್ಥಾನದ ಆವರಣಕ್ಕೆ ತಂದು ಮತ್ತೊಮ್ಮೆ ಪೂಜೆ ನೆರವೇರಿಸಲಾಯಿತು.
ಅಧಿಕಾರಿಗಳಿಂದ ಪರಿಶೀಲನೆ
ಈ ಸಂದರ್ಭದಲ್ಲಿ, ಮಾರಿಕಾಂಬಾ ದೇವಿಯ ಗಂಡನ ಮನೆಯ ದೇವಸ್ಥಾನದ ಬಳಿ ಸಾಗರ ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್, ಸಾಗರ ಉಪ ವಿಭಾಗದ ಎಸಿಪಿ ಬೆನಕ ಪ್ರಸಾದ್ ಐಪಿಎಸ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮಿತಿ ಸಂಚಾಲಕರ ಮಾತು
ನಂತರ, ರಥೋತ್ಸವ ಸಮಿತಿಯ ಸಂಚಾಲಕ ನವೀನ್ ಕೆ.ಸಿ. ಅವರು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.
PublicNext
30/01/2026 08:36 pm
LOADING...