ಶಿವಮೊಗ್ಗ : ಶಿವಮೊಗ್ಗದ ಗುಡ್ಡೇಕಲ್ ನಲ್ಲಿರುವ ಬಾಲಸುಬ್ರಹ್ಮಣ್ಯಂ ಸ್ವಾಮಿ ದೇವಸ್ಥಾನದಲ್ಲಿ ಏಳನೇ ವರ್ಷದ ತೈಪೂಸಂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಬಾಲಸುಬ್ರಮಣ್ಯಂ ಸ್ವಾಮಿ ದೇವಸ್ಥಾನ ಟ್ರಸ್ಟ್ ಹಾಗೂ 7ನೇ ವರ್ಷದ ಜಾತ್ರಾ ಸಮಿತಿ ವತಿಯಿಂದ ನಡೆದಿರುವ ಈ ಜಾತ್ರಾ ಮಹೋತ್ಸವವು ಬೆಟ್ಟದ ಮೇಲೆ ಕುಳಿತಿರುವ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಗೆ ಹಾಲಿನ ಅಭಿಷೇಕ ಮಾಡಲಾಯ್ತು.
ಮಹಿಳೆಯರು ಹಾಲಿನ ಕೊಡ ಹೊತ್ತು ಬಂದರೆ ಪುರುಷರು ಕಾವಡಿ ಹೊತ್ತು ಬಂದಿದ್ದಾರೆ. ನಂತರ ದೇವಸ್ಥಾನದಲ್ಲಿ ದೇವರ ಅಭಿಷೇಕ ನಡೆದಿದೆ. ಇನ್ನು ದೇವರಿಗೆ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯ್ತು. ಸಾವಿರಾರು ಭಕ್ತರ ಬಾಲಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು.
Kshetra Samachara
01/02/2026 03:54 pm
LOADING...