ಹಿರಿಯೂರು: ನಗರದ ವೇದಾವತಿ ಬಡಾವಣೆಯಲ್ಲಿ ಕೌಟುಂಬಿಕ ವಿಚಾರಕ್ಕೆ ನಡೆದ ಜಗಳದಲ್ಲಿ ಪತ್ನಿಯೇ ಹಲ್ಲೆ ಮಾಡಿ ಗಂಡನನ್ನ ಕೊಲೆ ಮಾಡಿದ್ದಾಳೆ.
ಕೊಲೆ ಬಳಿಕ ಆಕ್ಸಿಡೆಂಟ್ ಕಥೆ ಕಟ್ಟಿದ್ದು, ಪೊಲೀಸ್ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ. ಕೊಲೆಯಾದ ವ್ಯಕ್ತಿಯನ್ನ ಪುಟ್ಟಣ್ಣ (65) ಎಂದು ಗುರುತಿಸಲಾಗಿದೆ. ಆರೋಪಿ ಪಾಪಿ ಪತ್ನಿ ಕವಿತಾ (55) ಎಂದು ತಿಳಿದು ಬಂದಿದೆ. ಮನೆಯಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿತ್ತು.
ಈ ವೇಳೆ ಆಯುಧದಿಂದ ಪುಟ್ಟಣ್ಣನ ಮೇಲೆ ಹಲ್ಲೆ ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿದ್ದ ಪತ್ನಿ ಕವಿತಾ ಪರಮೇನಹಳ್ಳಿ ಬಳಿ ಜಮೀನಿಗೆ ಹೋಗುತ್ತಿದ್ದಾಗ ಆಕ್ಸಿಡೆಂಟ್ ಆಗಿದೆ ಎಂದು ಕಥೆ ಕಟ್ಟಿದ್ದಳು.
ಗಾಯದ ಸ್ವರೂಪ ನೋಡಿ ಸಂಶಯಗೊಂಡ ಪೊಲೀಸರು ಆರೋಪಿ ಕವಿತಾಳನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನಿಖೆಯಲ್ಲಿ ಕವಿತಾ ಕಳ್ಳಾಟ ಬಯಲಾಗಿದೆ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್, ಎಎಸ್ಪಿ ಶಿವಕುಮಾರ್ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ
Kshetra Samachara
31/01/2026 07:21 pm
LOADING...