ಚಿತ್ರದುರ್ಗ: ಮುರುಘಾ ಮಠಕ್ಕೆ ಸೇರಿದ ನಿವೇಶನಗಳ ಅಕ್ರಮ ಮಾರಾಟ ಆರೋಪದಡಿ ಮುರುಘಾಶ್ರೀ ಮತ್ತೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗದ ಹೊಸದುರ್ಗದಲ್ಲಿ ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಕೋರ್ಟ್ ನಿರ್ಬಂಧ ಮೀರಿ ಮಾರಾಟ ಮಾಡಲಾಗಿದೆ ಎಂದು ಮಠದ ಆಡಳಿತ ಸಮಿತಿ ನ್ಯಾಯಾಲಯಕ್ಕೆ ದೂರು ನೀಡಿದೆ. ಈ ಕುರಿತು ಮುರುಘಾಶ್ರೀ ವಿರುದ್ಧ ದಾವೆ ಹೂಡಲಾಗಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ.
ಮುರುಘಾಶ್ರೀ ವಿರುದ್ಧ ಈಗಾಗಲೇ ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿಯಾಗಿದ್ದಾರೆ (ಎ1 ಆರೋಪಿ). ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ಮೇಲೆ ಆಸ್ತಿ ವಹಿವಾಟು ನಡೆಸದಂತೆ ನಿರ್ಬಂಧ ವಿಧಿಸಿತ್ತು. ಆದಾಗ್ಯೂ, ಈ ನಿರ್ಬಂಧವನ್ನು ಉಲ್ಲಂಘಿಸಿ ನಿವೇಶನ ಮಾರಾಟ ನಡೆದಿದೆ ಎಂಬುದು ಮಠದ ಆಡಳಿತ ಸಮಿತಿಯ ಪ್ರಮುಖ ಆರೋಪವಾಗಿದೆ.
PublicNext
31/01/2026 09:33 pm
LOADING...