ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಬಿರು ಬಿಸಿಲನ್ನೂ ಲೆಕ್ಕಿಸದೆ ಜನಸಾಗರ: 'ಜಿ ರಾಮ್ ಜಿ' ರದ್ದತಿಗೆ ತೀವ್ರ ಹೋರಾಟ

ಚಳ್ಳಕೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮನರೇಗ ಯೋಜನೆ ಬದಲಿಗೆ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವುದು ಜನವಿರೋಧಿ, ಸಂವಿಧಾನ ವಿರೋಧಿ ಹಾಗೂ ಕಾರ್ಪೊರೇಟ್ ಪರವಾಗಿದ್ದು, ಇದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಚಳ್ಳಕೆರೆಯ ದೊಡ್ಡೇರಿ ಗ್ರಾಮದಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು.

ಈ ಹೋರಾಟಕ್ಕೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿದರು.

ತಾಲೂಕಿನ ದೊಡ್ಡೇರಿ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆಗೆ ಕಾಂಗ್ರೆಸ್ ಧ್ವಜಗಳು, ಪ್ಲಕಾರ್ಡ್‌ಗಳು, ಬ್ಯಾನರ್‌ಗಳೊಂದಿಗೆ ನಡೆದ ಪಾದಯಾತ್ರೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳು ಮೊಳಗಿದವು.

ಬಡವರ ಹಕ್ಕು ಕಸಿದುಕೊಳ್ಳುವ ಕಾಯ್ದೆಗೆ ಧಿಕ್ಕಾರ”, “ಜನರ ಬದುಕಿನ ಮೇಲೆ ದಾಳಿ ಮಾಡುವ ಸರ್ಕಾರಕ್ಕೆ ಎಚ್ಚರಿಕೆ”,

“ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ” ಎಂಬ ಘೋಷಣೆಗಳಿಂದ ಬಿರು ಬಿಸಿಲಿನಲ್ಲೂ ಪಾದಯಾತ್ರೆ ಕಾವು ಪಡೆಯಿತು ಪಾದಯಾತ್ರೆ ದೊಡ್ಡೇರಿ ಗ್ರಾಮದಿಂದ ಹೊರಟು ಡಿ ಉಪ್ಪಾರಹಟ್ಟಿ, ನಗರಂಗೆರೆ ಮೂಲಕ ಬೆಂಗಳೂರು ರಸ್ತೆ ನೆಹರು ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ನಡೆಯಿತು.

ಪಾದಯಾತ್ರೆ ವೇಳೆ ನಗರಂಗೆರೆಯಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು...

Edited By : PublicNext Desk
Kshetra Samachara

Kshetra Samachara

31/01/2026 10:06 pm

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ