ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಮ್ಮ 112ಗೆ ಹೆಚ್ಚಾಯ್ತು ಕರೆಗಳ ಸಂಖ್ಯೆ, 2024ಕ್ಕಿಂತ 2025ರಲ್ಲಿ 18% ಏರಿಕೆ! ಮಹಿಳೆಯರ ದೂರು ಕೂಡ ಗಣನೀಯ ಏರಿಕೆ

ಬೆಂಗಳೂರು: ತುರ್ತು ಸ್ಪಂದನಾ ವ್ಯವಸ್ಥೆಯಾದ 'ನಮ್ಮ 112ಗೆ ಕರೆ ಮಾಡಿ ದೂರು ನೀಡೋರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

2024ಕ್ಕೆ ಹೋಲಿಕೆ ಮಾಡಿದ್ರೆ 2025ರಲ್ಲಿ ನಮ್ಮ 112 ಗೆ ಕರೆ ಮಾಡಿದವರ ಸಂಖ್ಯೆ 18% ಏರಿಕೆ ಕಂಡಿದೆ.‌ 2025ರಲ್ಲಿ ನಮ್ಮ 112 ಒಟ್ಟು 5,22,742 ಕರೆಗಳನ್ನು ಸ್ವೀಕರಿಸಿದೆ, 2024ರಲ್ಲಿ ಒಟ್ಟು 4,23,912 ಕರೆಗಳು ಬಂದಿದ್ದವು, ಅದರಲ್ಲಿ 1,02,480 ಕರೆಗಳನ್ನು ಮಹಿಳೆಯರು ಕರೆ ಮಾಡಿ ದೂರು ನೀಡಿದ್ದಾರೆ.

ಇನ್ನೂ ತುರ್ತು ಕರೆಗಳ ಸಂಖ್ಯೆ ಹೆಚ್ಚಾದರೂ, 'ಹಲ್ಲೆ ಪ್ರಕರಣಗಳು' ಶೇ. 9 ರಷ್ಟು ಕಡಿಮೆಯಾಗಿದೆ. ಇನ್ನೂ ಹಿಂದೆ 112ಗೆ ಕರೆ ಮಾಡೋ ದೂರುದಾರರೊಂದಿಗೆ ನೇರವಾಗಿ ಹೋಯ್ಸಳ ಸಿಬ್ಬಂದಿ ಮಾತನಾಡುತ್ತಿದ್ರು, ಆದ್ರೆ ಹೊಸ ಟೆಕ್ನಾಲಜಿ ಬಳಕೆಯಾಗ್ತಿದ್ದು.

ಸದ್ಯ 112 ಗೆ ಕರೆ ಮಾಡಿದ ದೂರುದಾರರ ಫೋನ್ ನಂಬರ್ ಮತ್ತು ಹೆಸರು ಹೊಯ್ಸಳ ಸಿಬ್ಬಂದಿಗೆ ಗೊತ್ತಾಗುವುದಿಲ್ಲ. ಹೀಗಾಗಿ ದೂರುದಾರ ಮಾಹಿತಿಯನ್ನ ಗೌಪ್ಯವಾಗಿಡಲು ಸಹಕಾರಿಯಾಗಲಿದೆ.

ಇನ್ನು ಮುಂದೆ ವೈಯಕ್ತಿಕ ದೂರುಗಳ ಜೊತೆಗೆ ಸಮಾಜದಲ್ಲಿ ನಡೆಯೋ ಡ್ರಗ್, ರ್ಯಾಗಿಂಗ್ ಸೇರಿ ಅಕ್ರಮಗಳ ಕುರಿತು ಮಾಹಿತಿ ನೀಡುವಂತೆ ಆಡಳಿತ ವಿಭಾಗದ ಜಂಟಿ ಆಯುಕ್ತರಾದ ಕುಲ್ ದೀಪ್ ಕುಮಾರ್ ಜೈನ್ ಸಾರ್ವಜನಿಕರಲ್ಲಿ ಮಾತನಾಡಿದ್ದಾರೆ.

ಇನ್ನೂ ಪಬ್ಲಿಕ್ ನೆಕ್ಸ್ಟ್ ಜೊತೆಗೆ 112 ಕಾರ್ಯ ವೈಖರಿ ಕುರಿತ ಒಂದಷ್ಟು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ, ಬನ್ನಿ ನೋಡೋಣ..

Edited By :
PublicNext

PublicNext

31/01/2026 08:04 pm

Cinque Terre

18.38 K

Cinque Terre

0

ಸಂಬಂಧಿತ ಸುದ್ದಿ