ಹೊಸದುರ್ಗ: ತಾಲ್ಲೂಕಿನ ತಿಮ್ಮಪ್ಪನಹಟ್ಟಿ ಗ್ರಾಮದ ಭಾಗ್ಯಮ್ಮ ಎನ್ನುವ ಮಹಿಳೆ ಸಂಬಂಧಿಕರ ಗೃಹ ಪ್ರವೇಶಕ್ಕೆ ಹೋಗಿ ವಾಪಾಸ್ ಊರಿಗೆಹೋಗಲು ಹೊಸದುರ್ಗ ಟೌನ್ ನಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಬಸ್ಗಾಗಿಕಾಯುತ್ತಿದ್ದಾಗ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿರುವ ಸುಮಾರು 50 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲಿಸಿದ್ದರು...
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸರು ತಂಡವನ್ನು ರಚಿಸಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಬಂಗಾರದ ಆಭರಣಗಳನ್ನು ಕದಿಯುತ್ತಿದ್ದ ಹೊಳಲ್ಕೆರೆ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ಆರೋಪಿತಳಾದ ಮಂಜುಳಾ ಎನ್ನುವ ಮಹಿಳೆಯನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ...
Kshetra Samachara
02/02/2026 08:11 pm
LOADING...