ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯೂರು: ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒಕ್ಕೊರಲ ಮನವಿ

ಹಿರಿಯೂರು:ವಾಣಿವಿಲಾಸ ಸಾಗರ ಅಣೆಕಟ್ಟೆ 3 ವರ್ಷಗಳಲ್ಲಿ 3 ಬಾರಿ ಕೋಡಿ ಬಿದ್ದಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ಜಿಲ್ಲೆಯ ಏಕೈಕ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಾರಂಭ ಮಾಡಬೇಕು. ಮತ್ತೆ ಆರಂಭಿಸಲು ಆಗದಿದ್ದರೆ ಬಂಡವಾಳ ಹೂಡಿರುವ ಷೇರುದಾರರ ಹಣ ಮರಳಿಸಬೇಕು ಎಂಬ ಹಕ್ಕೊತ್ತಾಯ ತಾಲ್ಲೂಕಿನಲ್ಲಿ ಆರಂಭವಾಗಿದೆ.ಈಚೆಗೆ ಕಾರ್ಖಾನೆ ಕಾರ್ಮಿಕರ ಸಂಘಟನೆಯ ಮುಖ್ಯಸ್ಥರ ಮನೆಯಲ್ಲಿ ಔಪಚಾರಿಕವಾಗಿ ಸಭೆ ನಡೆಸಿರುವ ಹಿರಿಯೂರು, ಶಿರಾ, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕುಗಳ ಕಬ್ಬು ಬೆಳೆಗಾರರು, ಮೊದಲನೆಯದಾಗಿ ಕಾರ್ಖಾನೆಯನ್ನು ಸರ್ಕಾರ ಅಥವಾ ಖಾಸಗಿಯವರ ಮೂಲಕ ಆರಂಭಿಸುವಂತೆ ಒತ್ತಾಯಿಸಲು ನಿರ್ಧರಿಸಿದರು. 'ಪ್ರಸ್ತುತ ಕಾರ್ಖಾನೆ ಪುನರಾರಂಭ ಅಸಾಧ್ಯ' ಎಂದು ಸರ್ಕಾರ ತೀರ್ಮಾನಿಸಿದಲ್ಲಿ ಷೇರುದಾರರ ಹಣ ಮರಳಿಸುವಂತೆ ಹೋರಾಟ ನಡೆಸಲೂ ತೀರ್ಮಾನಿಸಲಾಗಿದೆ.

1962ರಲ್ಲಿ ನೋಂದಣಿಯಾಗಿರುವ ಸಕ್ಕರೆ ಕಾರ್ಖಾನೆಗೆ ಒಟ್ಟಾರೆ 275 ಎಕರೆ ಜಮೀನು ಇದ್ದು, ಅದರಲ್ಲಿ 210 ಎಕರೆ ಜಮೀನು ಇಂಡಸ್ಟ್ರಿ ಉದ್ದೇಶಕ್ಕೆಂದು ಭೂ ಪರಿವರ್ತನೆ ಹೊಂದಿದೆ. 1971- 72ರಲ್ಲಿ ಆರಂಭಗೊಂಡು, 1984- 85ರವರೆಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿತ್ತು. 1985ರಲ್ಲಿ ಕಬ್ಬಿನ ಕೊರತೆಯ ಕಾರಣಕ್ಕೆ ಸ್ಥಗಿತಗೊಂಡು ಲೇ ಆಫ್ ಘೋಷಿಸಲಾಯಿತು..

Edited By : PublicNext Desk
Kshetra Samachara

Kshetra Samachara

30/01/2026 07:08 am

Cinque Terre

6.68 K

Cinque Terre

0

ಸಂಬಂಧಿತ ಸುದ್ದಿ