ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಕುಲ ಕಸುಬಿನಿಂದ ಜಾತಿ ವ್ಯವಸ್ಥೆ ಹುಟ್ಟಿಕೊಂಡಿವೆ - ಇಓ ಎಚ್. ಶಶಿಧರ್

ಚಳ್ಳಕೆರೆ: ಜ್ಞಾನ ಪ್ರತಿಭೆಯಿಂದ ಶ್ರೀ ಸವಿತಾ ಮಹರ್ಷಿ ಅವರ ಚಿಂತನೆಗಳು ಸಮಾಜಕ್ಕೆ ಮಾದರಿಯಾಗಿ ಉಳಿದುಕೊಂಡಿದೆ ಎಂದು ತಾಪಂ ಇಒ ಎಚ್. ಶಶಿಧರ್ ಹೇಳಿದರು. ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ಅವರ ಭಾವಚಿತ್ರಕ್ಕೆ ಪುಪಾರ್ಚನೆ ಮಾಡಿ ಮಾತನಾಡಿದರು.

ಕುಲ ಕಸುಬಿನಿಂದ ಜಾತಿ ವ್ಯವಸ್ಥೆ ಹುಟ್ಟಿಕೊಂಡಿವೆ ಎನ್ನಲಾಗಿದೆ. ಆದರೆ, ಬದಲಾದ ಸಮಾಜದಲ್ಲಿ ಕುಲ ಕಸುಬುಗಳು ಕಣ್ಮರೆಯಾಗುತ್ತಿವೆ. ಆದರೂ, ಜಾತಿ ಪದ್ದತಿ ನಿರ್ಮೂಲನೆ ಆಗುತ್ತಿಲ್ಲ. ಇದೊಂದ ಪಿಡುಗಾಗಿ ಸಮಾಜವನ್ನು ಕಾಡುತ್ತಿದೆ.ಸವಿತಾ ಮಹರ್ಷಿ ಅವರು ಪ್ರತಿಪಾದಿಸಿದ ಸಮಾನತೆ ಚಿಂತನೆಗಳು ಪೋಷಣೆ ಆಗಬೇಕು. ಶೈಕ್ಷಣಿಕವಾಗಿ ಪ್ರಗತಿ ಕಂಡುಕೊಳ್ಳಬೇಕು. ಪ್ರತಿ ಸಮುದಾಯಗಳು ಸಾಮಾಜಿಕ ಬದಲಾವಣೆಯಲ್ಲಿ ಬದುಕಿನ ಸುಧಾರಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಸಮಾಜದ ಮುಖಂಡ, ಹಿರಿಯ ಪತ್ರಕರ್ತ ಟಿ. ತಿಪ್ಪೇಸ್ವಾಮಿ ಮಾತನಾಡಿ, ವೇದ ಉಪನಿಷತ್ತು ಕಾಲಘಟ್ಟದಲ್ಲಿ ಸಮಾನತೆಗೆ ಪ್ರತಿಪಾದಿಸಿದ ಕೀರ್ತಿ ಸವಿತಾ ಮಹರ್ಷಿ ಅವರಿಗೆ ಸಲ್ಲುತ್ತದೆ. ಪ್ರತಿಭೆ ಕೆಲವ ಸ್ವತ್ತಲ್ಲ. ಪ್ರತಿ ಕುಲ,ಜಾತಿ, ಜನಾಂಗದಲ್ಲೂ ಇರುತ್ತದೆ ಎನ್ನುವ ಮೂಲಕ ಜ್ಞಾನಾರ್ಜನೆಯಲ್ಲಿ ಬೆಳೆದು ತೊರಿಸಿದವರು. ಸವಿತಾ ಸಮಾಜ ಮುಖ್ಯವಾಹಿನಿಗೆ ಬರಲು ಸರ್ಕಾರದ ಸೌಲಭ್ಯಗಳು ಸಿಗಬೇಕು.ಕೌಶಲ ಆಧಾರಿತವಾಗಿ ಅನುಕೂಲ ಕಲ್ಪಿಸಬೇಕು.ಮನುಷ್ಯ ಹುಟ್ಟಿನಿಂದ ಸಾಯುವ ತನಕ ನಡೆಯುವ ವಿಧಿವಿಧಾನ ಪದ್ದತಿಗಳಿಗೆ ಸವಿತಾ ಸಮಾಜದ ಕುಲ ಕಸುಬು ಅಗತ್ಯ ಇದೆ. ಜನಾಂಗವನ್ನು ಗೌರವದಿಂದ ಕಾಣಬೇಕು. ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವಕ್ಕೆ ಸಂಘಟನೆ ಬೇಕು. ಪ್ರತಿಯೊಬ್ಬರ ಸಹಕಾರ ಇದ್ದಾಗ ಮಾತ್ರ ಜನಾಂಗದ ಬೇಡಿಕೆ ಈಡೇರಿಕೊಳ್ಳು ರೀತಿಯಲ್ಲಿ ಸಂಘಟನೆ ಕಟ್ಟಲು ಸಾಧ್ಯ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

27/01/2026 06:03 pm

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ