ಶಿರಸಿ: ನಗರದ ಶ್ರೀ ರಾಘವೇಂದ್ರ ಮಠದ ನೂತನ ಅಧ್ಯಕ್ಷರಾಗಿ ಶ್ರೀ ಶ್ರೀನಿವಾಸ್ ಹೆಬ್ಬಾರ್ ಹಾಗೂ ಉಪಾಧ್ಯಕ್ಷರಾಗಿ ಐಎಂ ಹೆಗಡೆ ಅವರು ಆಯ್ಕೆಯಾಗಿರುತ್ತಾರೆ. ಶ್ರೀ ರಾಘವೇಂದ್ರ ಮಠವು ಅತಿ ಹೆಚ್ಚು ಅಭಿವೃದ್ಧಿಯಾಗುತ್ತಿರುವುದರಲ್ಲಿ ಬೆನ್ನೆಲುಬಾಗಿ ನಿಂತಿರುವಂತಹ ಶ್ರೀ ಶ್ರೀನಿವಾಸ್ ಹೆಬ್ಬಾರ್ ಅವರು ಈ ಮೊದಲು ನಡೆದಂತಹ ಕಳೆದ ಆರಾಧನಾ ಮಹೋತ್ಸವಕ್ಕೆ ಬಂದಂತಹ 15 ಸಾವಿರಕ್ಕೂ ಹೆಚ್ಚು ಜನ ಭಕ್ತಾದಿಗಳಿಗೆ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಹಾಗೂ ಅನ್ನಪ್ರಸಾದಕ್ಕೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಸಿದ ಹೆಗ್ಗಳಿಕೆ ಅವರದು. ಶ್ರೀ ದೇವರ ಆಶೀರ್ವಾದದೊಂದಿಗೆ ಇಂದು ಶ್ರೀ ಶ್ರೀನಿವಾಸ ಹೆಬ್ಬಾರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಶ್ರೀ ರಾಘವೇಂದ್ರ ಮಠ ಇನ್ನು ಹೆಚ್ಚಿನ ಅಭಿವೃದ್ಧಿ ಆಗಲಿ ಎಂದು ಶಿರಸಿಯ ಜನತೆ ಸಂತಸವನ್ನು ವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಮಠದ ಸದಸ್ಯರಾದ ನವೀನ ಶೆಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
02/02/2026 09:43 pm
LOADING...