ಶಿರಸಿ: ಮೂಲತಃ ಕಾನಸೂರಿನ ವಿಧೂಷಿ ಶ್ವೇತಾ ಆರ್. ಭಟ್ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ‘ಐಬಿಆರ್ ಅಚೀವರ್ (IBR Achiever)’ ಎಂಬ ಗೌರವಾನ್ವಿತ ಬಿರುದು ಲಭಿಸಿದೆ.
ಶ್ವೇತಾ ಭಟ್ ಅವರು ಶ್ರವಣ ಮತ್ತು ಮಾತು ಅಸಮರ್ಥತೆಯಿರುವ ವಿಶೇಷ ಸಾಮರ್ಥ್ಯದ ವಿದ್ಯಾರ್ಥಿನಿಗೆ ಭರತನಾಟ್ಯದ ಸಾಂಪ್ರದಾಯಿಕ ಏಕಾಂಗ ಪ್ರದರ್ಶನವಾದ ‘ರಂಗಪ್ರವೇಶ ’ ಪ್ರಸ್ತುತಿ. ಮತ್ತು ಯಶಸ್ವಿಯಾಗಿ ತರಬೇತಿ ನೀಡಿದ ವಿಶಿಷ್ಟ ಸಾಧನೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ರಂಗಪ್ರವೇಶ ಕಾರ್ಯಕ್ರಮವು 2025ರ ನವೆಂಬರ್ 16ರಂದು ಚಿತ್ರದುರ್ಗದ ಜಿ.ಜಿ. ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಸಂಪಾದಕೀಯ ಮಂಡಳಿಯಿಂದ ನಡೆಸಲಾದ ಸವಿಸ್ತಾರ ಪರಿಶೀಲನೆಯ ನಂತರ, ಈ ಸಾಧನೆಯನ್ನು 2025ರ ಡಿಸೆಂಬರ್ 10ರಂದು ಅಧಿಕೃತವಾಗಿ ದೃಢಪಡಿಸಲಾಗಿದೆ.
ಶ್ವೇತಾ ಭಟ್ ಅವರ ಈ ಸಾಧನೆ ವಿಶೇಷ ಸಾಮರ್ಥ್ಯದ ಮಕ್ಕಳ ಕಲಾ ಶಿಕ್ಷಣಕ್ಕೆ ಹೊಸ ದಿಕ್ಕು ನೀಡಿದ್ದು, ಸಮಾಜಕ್ಕೆ ಪ್ರೇರಣೆಯಾದ ಸಾಧನೆಯಾಗಿದೆ. ಶ್ವೇತಾ ಭಟ್ ಅವರು ಕಾನಸೂರಿ ರತ್ನಾಕರ ಭಟ್ ಹಾಗೂ ನಾಗರತ್ನ ದಂಪತಿಯ ಪುತ್ರಿಯಾಗಿದ್ದಾಳೆ.
Kshetra Samachara
22/01/2026 04:04 pm
LOADING...